ಮಂಡ್ಯ: ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳ ಹೊರತಾಗಿ ಕಂದಾಯ ಸೇವೆಗಳಲ್ಲಿ ಸುಧಾರಣೆ ತರಲು ಆರನೆಯದಾಗಿ ಭೂ ಗ್ಯಾರೆಂಟಿಯನ್ನು ಪರಿಚಯಿಸಲಾಗುತ್ತಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಕಶ್ಯಪ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಭೂ ಸಮಸ್ಯೆಗಳ ಸಂಬಂಧಿಸಿದಂತೆ ರೈತರು ಇನ್ನು ಕಂದಾಯ ಇಲಾಖೆಗೆ ಅಲೆಯುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕುಳಿತು, ಅಥವ ಕೈಬೆರಳಂಚಿನಲ್ಲಿ ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.
ಸರ್ಕಾರ ಆರಂಭವಾಗಿ ಎರಡು ವರ್ಷ ತುಂಬುವ ಹಿನ್ನಲೆ ಮೇ.೨೦ರಂದು ಸಮರ್ಪಣಾ ಸಂಕಲ್ಪ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ಏರ್ಪಡಿಸಲಾಗಿದ್ದು, ಅಂದು ೧,೧೧,೧೧೧ ಮಂದಿಗೆ ಹಕ್ಕುಪತ್ರಗಳನ್ನು ವಿತರಿಸುತ್ತಿದ್ದು, ಸರ್ಕಾರ ಬಂದ ೭೭೦ ದಿನಗಳಲ್ಲಿಯೇ ಈ ಸಾಧನೆ ಮಾಡುವ ಮೊದಲ ಸರ್ಕಾರ ನಮ್ಮದಾಗಿದೆ ಎಂದರು.
ಸರ್ಕಾರ ಗ್ಯಾರೆಂಟಿ ಯೋಜನೆಗೆ ಘೋಷಿಸಿ ಕೊಟ್ಟ ಮಾತಿನಂದತೆ ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದು, ಇದಕ್ಕಾಗಿ ೫೨ ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಇದೀಗ ಭೂ ಗ್ಯಾರೆಂಟಿ ಮೂಲಕ ಬೆಳೆ ನಷ್ಟ, ಪೋಡಿ ಮುಕ್ತ ಗ್ರಾಮ, ಸಾರ್ವಜನಿಕ ಆಸ್ತಿ ಸಂರಕ್ಷಣೆ, ತ್ವರಿತ ಮತ್ತು ಪಾರದರ್ಶಕ ಭೂ ನ್ಯಾಯ ಸೇರಿದಂತೆ ಹತ್ತು ಹಲವು ಕಂದಾಯ ಸಂಬಂಧಿತ ಸೇವೆಗಳನ್ನು ಸರಳೀಕರಣ ಮಾಡಿದ್ದು, ಮನೆಯಲ್ಲೇ ಕುಳಿದು ಮಧುವೆ ನೊಂದಣಿಯನ್ನು ಮಾಡುವ ಕೆಲಸ ಕಾರ್ಯಗತ ಮಾಡಲಾಗುವುದು, ಸರ್ಕಾರದ ಅವಧಿಯೊಳಗೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರಿನ ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಯೋಜನೆ, ಸಣ್ಣ ನೀರಾವತಿಯಿಂದ ಟ್ರೀಟೆಡ್ ವಾಟರ್ ಮೂಲಕ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಒದಗಿಸಲಾಗುವುದು, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನ ೮೮ ಕೆರೆ ತುಂಬಿಸಲು ಯೋಜನೆ, ರಾಜ್ಯಾದ್ಯಂತ ೬೬ ಮೊರಾರ್ಜಿ ದೇಸಾಯಿ ಶಾಲೆಗಳನ್ನು ತೆರೆಯಲು ಯೋಜನೆ, ಇನ್ವೆಸ್ಟ್ ಕರ್ನಾಟಕ ಮೂಲಕ ೬,೫೭,೬೦೦ ಕೋಟಿ ಬಂಡವಾಳ ಆಕರ್ಶಿಸಿದ್ದು, ವಿದೇಶಿ ರಾಷ್ಟ್ರಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿಯೇ ಮೂರನೇ ಸ್ಥಾನ ಅಲಂಕರಿಸಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಚಿದಂಬರ್, ಮಂಜುನಾಥ್, ಪ್ರದೀಪ್, ಸಿ.ಎಂ.ದ್ಯಾವಪ್ಪ ಇದ್ದರು.





