Mysore
24
overcast clouds

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಜೆಡಿಎಸ್-ಬಿಜೆಪಿಗೆ ಲೋಕಸಭೆ ಚುನಾವಣೆಯ ಭಯ ಶುರುವಾಗಿದೆ : ಸಚಿವ ಚಲುವರಾಯಸ್ವಾಮಿ

ಮಂಡ್ಯ : ಬಿಜೆಪಿ-ಜೆಡಿಎಸ್‍ಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ, ಅದಕ್ಕಾಗಿಯೇ ಇಲ್ಲ-ಸಲ್ಲದ ವಿಚಾರಗಳನ್ನು ಇಟ್ಟುಕೊಂಡು ಪ್ರತಿಭಟನೆಯ ನಾಟಕವಾಡುತ್ತಿವೆ. ಅಂತಿಮವಾಗಿ ಅವರಿಗೆ ಇದರಿಂದ ಯಾವುದೇ ಫಲ ಸಿಗುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ದೊಡ್ಡ ದೊಡ್ಡ ಹಗರಣವಾಗಿದೆ ತನಿಖೆ ಮಾಡಿ ಬಿಲ್ ಕೊಡುತ್ತೇವೆ, ಜೆಡಿಎಸ್-ಬಿಜೆಪಿ ಅವರಿಗೆ ಏನು ಹೇಳುವುದಕ್ಕಾಗಲ್ಲ. ಗ್ಯಾರಂಟಿ ಕೊಟ್ಟಿದ್ದೇವೆ ಅದಕ್ಕೆ ಅವರಿಗೆ ಟೀಕೆ ಮಾಡಲು ಬೇರೆ ವಿಚಾರಗಳು ಸಿಗುತ್ತಿಲ್ಲ, ಆದ್ದರಿಂದ ಸುಳ್ಳು ಪತ್ರ ಬರೆಯುವ ಕೆಲಸ ಮಾಡಿದ್ದಾರೆ, ಆ ಪತ್ರ ನಕಲಿ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೊಡ್ಡ ದೊಡ್ಡ ಹಗರಣ ಆಗಿದೆ. ತನಿಖೆ ಮಾಡದೆ ಬಿಲ್ ಕೊಡಿ ಅಂದ್ರೆ ಹೇಗೆ? ಎಲ್ಲಾ ತನಿಖೆ ಮಾಡಿ ಕೊಡ್ತಿವಿ ಅಂತ ಹೇಳಿದ್ದೇವೆ ಎಂದರು. ಸರ್ಕಾರಿ ನೌಕರರು ಗಟ್ಟಿಯಾಗಿ ನಿಲ್ಲುತೀರಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತೀರಾ, ಆಗ ಸರ್ಕಾರಕ್ಕೆ ಗೌರವ ಸಿಗುತ್ತೆ. ಜನರಿಗೆ ಕಿರುಕುಳ ಕೊಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಸರ್ಕಾರದ ಯೋಜನೆ ಕಾರ್ಯಕ್ರಮವನ್ನು ಜನರಿಗೆ ತಲುಪಿಸಿ ಎಂದು ಸಚಿವರು ಸಲಹೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!