Mysore
23
overcast clouds
Light
Dark

ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯೂನಿಟ್ ಹೆಚ್ಚುಗೊಳಿಸಿ : ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಇರುವ ಸರ್ಕಾರಿ  ಮತ್ತು ಖಾಸಗಿ  ವಸತಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯೂನಿಟ್ ಪ್ರಾರಂಭಿಸಿ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ  ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಯನ್ನು ಕುರಿತು ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ವಹಿಸುವ ಕೆಲಸಗಳು ಮಕ್ಕಳಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಯೂನಿಟ್ ಗೆ ಸೇರಿಸಿ ತರಬೇತಿ ಕೊಡಿಸಿ ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದರೆ ಆಗುವ ಅನುಕೂಲತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ನೊಂದಣಿಯಾಗುವಂತೆ ಪ್ರೆರೇಪಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಶಾಲೆಯಲ್ಲಿ ಹೆಚ್ಚು ಪ್ರದರ್ಶನ ಗಳನ್ನು ಏರ್ಪಡಿಸಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡಿಸಬೇಕು, ಇದರ ಜೊತೆಗೆ ಶಿಕ್ಷಕರು ಕೂಡ ಭಾಗಿಯಾಗಬೇಕು ಎಂದು ತಿಳಿಸಿದರು.

ವಸತಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯೂನಿಟ್ ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ಯೂನಿಟ್ ಆರಂಭಿಸಬೇಕು. ಮಕ್ಕಳೇ ದೇಶದ ಮುಂದಿನ ಆಸ್ತಿ‌. ಮಕ್ಕಳಿಂದ ದೇಶಕ್ಕೆ ಒಳಿತಾಗಬೇಕು ಎಂದರೆ ಅವರಿಗೆ ಶಿಸ್ತು, ಮೌಲ್ಯಯುತ ಮತ್ತು ಸಮಾಜಮುಖಿ ಕೆಲಸಗಳನ್ನು ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು.

ಕನ್ನಡ ಅಥವಾ ಸಮಾಜ ವಿಜ್ಞಾನದ ಶಿಕ್ಷಕರಿಗೆ ಸ್ಕೌಟ್ಸ್ ಮತ್ತು  ಗೈಡ್ಸ್ ನ ಬಗ್ಗೆ ತರಬೇತಿ ಕೊಡಿಸಿ ಅವರ ಮೂಲಕ ಮಕ್ಕಳಿಗೆ ಇದರ ಅರಿವು ಮೂಡಿಸ, ಚಟುವಟಿಕೆ ಚುರುಕುಗೊಳಿಸುವುದ ಮುಖಾಂತರ ಅವರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಇದರ ಬಗ್ಗೆ ಖಾಸಗಿ ಶಾಲೆಯ ಪ್ರಾಂಶುಪಾಲರುಗಳು ಗಮನಹರಿಸಿ ಯೂನಿಟ್ ಪ್ರಾರಂಭ ಮಾಡಿ. ಇದರಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ,  ಎಚ್ ಮಲ್ಲಿಗೆರೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಕೇಂದ್ರ ಮಾಡಿ ಕ್ಯಾಂಪಸ್ ತೆರೆಯಬೇಕು ಎಂಬ ಉದ್ದೇಶದಿಂದ 2 ಎಕರೆ ಜಮೀನು ಕೊಡಬೇಕೆಂದು ಮನವಿ ಸಲ್ಲಿಸಲಾಗಿದ್ದು, ಜಿಲ್ಲಾಡಳಿತವು ಇದಕ್ಕೆ ಸಹಕಾರ ನೀಡಿದೆ ಅದಕ್ಕೆ ಬೇಕಾದಂತಹ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬೇಕಿದೆ ಎಂದರು.

ಸಭೆಯಲ್ಲಿ ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸೀತಾ ಲಕ್ಷ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಚಂದ್ರಕಾಂತ, ಭಾರತ್ ಸ್ಕೌಟ್ಸ್ ಗೈಡ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಭಕ್ತ ವತ್ಸಲ, (ಗೈಡ್) ಜಿಲ್ಲಾ ಆಯುಕ್ತ ರಾದ ಕೆ.ಸಿ. ನಾಗಮ್ಮ, (ಸ್ಕೌಟ್) ಡಾ.ಅನಿಲ್ ಕುಮಾರ್, ಕೇಂದ್ರ ಸ್ಥಾನಿಕ ಆಯುಕ್ತರಾದ ನಾಗರೇವಕ್ಕ, ಖಜಾಂಚಿ ಹೆಚ್.ವಿ.ಜಯರಾಂ, ಕಾರ್ಯದರ್ಶಿ ಶಿವರಾಮೇಗೌಡ, ಜಂಟಿ ಕಾರ್ಯದರ್ಶಿ ಪದ್ಮಾವತಿ, ಮಂಡ್ಯ ದಕ್ಷಿಣ ವಲಯ ಸ್ಥಳೀಯ ಕಾರ್ಯದರ್ಶಿ ಸೌಮ್ಯಲತ, ಶ್ರೀ ರಂಗ ಪಟ್ಟಣ ತಾಲ್ಲೂಕು ಜಂಟಿ ಕಾರ್ಯದರ್ಶಿ ಮತ್ತು ಅಜೀವ ಸದಸ್ಯರು ಮಂಜುಳ, ಅಜೀವ ಸದಸ್ಯರುಗಳಾದ ಚಂದ್ರಕಲಾ, ಸುಜಾತಮಣಿ, ಚಂದ್ರು, ಗಾಯಿತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.