ಕೆ.ಆರ್.ಪೇಟೆ : ತಾಲ್ಲೂಕಿನ ಚಿಕ್ಕೋನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಬಂಧಿಸಿದ್ದಾರೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ್ ಹಡಪದ ಹಾಗೂ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧಿಕ್ಷಕಿ ರಾಧಾಮಣಿ ಅವರ ನೇತೃತ್ವದಲ್ಲಿ ಪಾಂಡವಪುರ ವಿಭಾಗದ ಅಬಕಾರಿ ನಿರೀಕ್ಷಕ ವೈ.ಜೆ.ಪ್ರಫುಲ್ಲ ಚಂದ್ರ ಹಾಗೂ ಕೆ.ಆರ್.ಪೇಟೆ ಅಬಕಾರಿ ಅಧಿಕಾರಿ ದೀಪಕ್, ಸಿಬ್ಬಂದಿ ಖಚಿತ ಮಾಹಿತಿಯ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿ ೩.೫ ಲಕ್ಷ ರೂ. ಬೆಲೆ ಬಾಳುವ ಸುಮಾರು ೫ ಕೆ.ಜಿ. ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗಾಂಜಾ ಸಾಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು, ಗಾಂಜಾ ಸಾಗಿಸುತ್ತಿದ್ದ ಪಾಂಡವಪುರದ ಉಮ್ರಾಜ್ ಬೇಗ್ ಅಲಿಯಾಸ್ ಮುಜುನು, ಜಬಿವುಲ್ಲಾ ಅಬ್ದುಲ್ ರಹೀಮ್, ಚನ್ನರಾಯಪಟ್ಟಣದ ಸೈಯದ್ ಹುಸೇನ್ ಅಲಿಯಾಸ್ ತೌಫಿಕ್ ಸೈಯದ್ ಆಸೀಫ್ ಉಲ್ಲಾ ಎಂಬ ಮೂವರು ಆರೋಪಿಗಳನ್ನು ಬಂಽಸಿ, ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಬಕಾರಿ ಸಿಬ್ಬಂದಿಗಳಾದ ಎಚ್.ವಿ.ರಾಮು, ಪಿ.ಜಿ.ದಿಲೀಪ್ ಕುಮಾರ್, ಎನ್.ದಿನೇಶ್, ಜಿ.ಎನ್.ಸಂದೀಪ್, ಮುಖ್ಯ ಪೇದೆ ವೈರಮುಡಿ, ಎಂ.ಜಿ.ನಾಗರಾಜು, ಸಂದೀಪ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಽಸಿರುವ ಅಬಕಾರಿ ಅಽಕಾರಿಗಳ ತಂಡವನ್ನು ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ್ ಹಡಪದ ಅವರ ಹಾಗೂ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ ಅವರು ಅಭಿನಂದಿಸಿದ್ದಾರೆ.





