ಮಂಡ್ಯ: ಕಾಡಾನೆ ದಾಳಿಯಿಂದ ಬಾಳೆ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರು ಎಂಬುವವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳು ಬಾಳೆ ಬೆಳೆಯನ್ನು ತಿಂದು ಸಂಪೂರ್ಣವಾಗಿ ನಾಶಪಡಿಸಿವೆ. ಬೆಳಿಗ್ಗೆ ಎದ್ದು ಬಾಳೆ ತೋಟ ನೋಡುತ್ತಿದ್ದಂತೆ ಆಘಾತಕ್ಕೊಳಗಾದ ರಾಮಚಂದ್ರು ಅವರು, ತೀವ್ರ ಕಂಗಾಲಾಗಿದ್ದಾರೆ.
ಬೆಳೆ ಜೊತೆಗೆ ತೋಟಕ್ಕೆ ಅಳವಡಿಸಿರುವ ಸೋಲಾರ್ ತಂತಿಯನ್ನೇ ತುಳಿದು ನಾಶ ಮಾಡಿದ್ದು, ಆನೆಗಳು ಶಿಂಷಾ ಕಾಡಿನಿಂದ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಬಾಳೆ ಬೆಳೆ ನಾಶದಿಂದ ರಾಮಚಂದ್ರು ಅವರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.





