ಮಂಡ್ಯ: ಕಾಲ ಕೂಡಿ ಬಂದಾಗ ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗಲೇಬೇಕು. ಆಗೇ ಆಗುತ್ತಾರೆ. ಎಲ್ಲಾ ಶಾಸಕರು ಡಿಕೆಶಿ ಪರ ಇದ್ದಾರೆ ಎಂದು ಹೇಳಿದರು.
ಈ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗೆ ಫುಲ್ ಸ್ಟಾಪ್ ಬಿದ್ದಿರುವ ಬೆನ್ನಲ್ಲೇ ಶಾಸಕರೊಬ್ಬರು ಈ ರೀತಿ ಹೇಳಿರುವುದು ಭಾರೀ ಚರ್ಚೆ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಎಂದು ಘೋಷಿಸಿದ್ದಾರೆ. ಆದರೆ ಡಿಕೆಶಿ ಪರ ಇರುವ ಶಾಸಕರು ಡಿ.ಕೆ.ಶಿವಕುಮಾರ್ ಸಿಎಂ ಆಗಲೇಬೇಕು ಎಂದು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.





