Mysore
30
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಮತ ಎಣಿಕೆ; ಜಾಗರೂಕರಾಗಿ ಕರ್ತವ್ಯ ನಿಭಾಯಿಸಿ: ಎಡಿಸಿ ನಾಗರಾಜು

ಮಂಡ್ಯ: ಮತ ಎಣಿಕೆ ದಿನದಂದು ಸಹಾಯಕ ಚುನಾವಣಾಧಿಕಾರಿ, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ ಅಬ್ಸರ್ವರ್ ಗಳು ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನಿಭಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್  ಹೇಳಿದರು.

ಅವರು ಇಂದು ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಇವಿಎಂ-ಅಂಚೆ ಮತ ಏಣಿಕೆ ಸಿಬ್ಬಂದಿ ಗಾಗಿ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಚೆ ಮತ ಎಣಿಕೆಯು ಬಹಳ ಮುಖ್ಯವಾಗಿರುವದರಿಂದ ಯಾವುದೇ ಲೋಪದೋಷವಾಗದಂತೆ ಮತ ಎಣಿಕೆಯನ್ನು ಜಾಗರೂಕತೆಯಿಂದ ನಿಭಾಯಿಸಬೇಕು, ಯಾವುದೇ ಗೊಂದಲಮಯ ವಾತಾವರಣ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ಮತ ಎಣಿಕೆ ದಿನದಂದು ಮತ ಎಣಿಕೆ ಸಿಬ್ಬಂದಿಗಳು ಸರಿಯಾಗಿ ಬೆಳಿಗ್ಗೆ 7 ಗಂಟೆ ಅಷ್ಟರಲ್ಲಿ ಕಡ್ಡಾಯವಾಗಿ ಎಲ್ಲರೂ ಇರಲೇಬೇಕು ಯಾರು ಕೂಡ ತಡವಾಗಿ ಬರಬಾರದು, ನಿಮಗೆ ನೀಡಿರುವಂತಹ ಗುರುತಿನ ಚೀಟಿಯನ್ನು ಪೊಲೀಸ್ ಅವರಿಗೆ ತೋರಿಸಿ ಒಳಗೆ ಬರಬೇಕು.

ಮತ ಎಣಿಕೆ ದಿನದಂದು ಬೇಕಾದ ಎಲ್ಲಾ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ವಯ ನಿಗದಿತ ಕಾಲಾವಧಿಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ಕೊಡದೆ ಚುನಾವಣಾ ಮತ ಎಣಿಕೆ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎಲ್ಲಾ ಇವಿಎಂ-ಅಂಚೆ ಮತ ಏಣಿಕೆ ಸಿಬ್ಬಂದಿಗಳು ಹಾಗೂ ಇವಿಎಂ-ಅಂಚೆ ಮತ ಏಣಿಕೆ ಸಿಬ್ಬಂದಿಗಳಿಗೆ ತರಬೇತಿ ನೀಡಿದಂತಹ ಜಿಲ್ಲಾ ಮಟ್ಟದ ಚುನಾವಣಾ ತರಬೇತಿದಾರ ಹಾಗೂ ಸಹ ಶಿಕ್ಷಕರಾದ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: