Mysore
30
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ಬೂದನೂರು|ಭ್ರಷ್ಟಾಚಾರ ತನಿಖೆ ವಿಳಂಬ: ಕಿವಿಗೆ ಹೂ ಮುಡಿದು ವಿನೂತನ ಪ್ರತಿಭಟನೆ

ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಪಿಡಿಒ ಅವರು ನಡೆಸಿರುವ ಅಕ್ರಮ, ಭ್ರಷ್ಟಾಚಾರದ ತನಿಖೆಗೆ ಸಮಿತಿ ರಚಿಸಿದರೂ ತನಿಖೆಗೆ ಮುಂದಾಗದೆ ಜಿಪಂ ಸಿಇಒ ಅಮಿಷ, ಪ್ರಭಾವಕ್ಕೆ ಒಳಗಾಗಿ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಂತಮನೆ ನಮ್ಮ ಹಕ್ಕು ಸಂಘಟನೆಯ ಸದಸ್ಯರು ಕಿವಿಗೆ ಹೂ ಮುಡಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಬೂದನೂರು ಗ್ರಾಮ ಪಂಚಾಯಿತಿ ಅಕ್ರಮದ ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ೧೦ನೇ ದಿನದ ಧರಣಿಯಲ್ಲಿ ಸಂಘಟನೆಯ ಕಾರ್ಯಕರ್ತರು, ಸುಳ್ಳು ಮಾಹಿತಿ ನೀಡಿ ವಂಚಿಸಿ ಜಿಪಂ ಸಿಇಒ ಕಿವಿಗೆ ಹೂ ಮುಡಿಸುತ್ತಿದ್ದಾರೆ. ಅದಕ್ಕೆ ನಾವೇ ಹೂ ಮುಡಿದುಕೊಂಡು ಪ್ರತಿಭಟಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!