Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಗಗನಚುಕ್ಕಿ ಜಲಪಾತೋತ್ಸವಕ್ಕೆ ವರ್ಣರಂಚಿತ ತೆರೆ

ಮಳವಳ್ಳಿ : 2 ದಿನಗಳ ಕಾಲ ನಡೆದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ ಬಿದಿದ್ದು, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಭಾನುವಾರ ರಜೆ ಹಿನ್ನೆಲ್ಲೆಯಲ್ಲಿ ಬೆಂಗಳೂರು, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಿರೀಕ್ಷೆಗೂ ಮೀರಿ ಬಂದಿದ್ದ ಸಾವಿರಾರು ಪ್ರವಾಸಿಗರು ಪರಿಸರ ಹಾಗೂ ಸಾಂಸ್ಕೃತಿಕ ರಸದೌತಣವನ್ನು ಸವಿದರು.

ಹಾಲಿನ ನೊರೆಯಂತೆ ದುಮ್ಮಿಕ್ಕಿ ಹರಿಯುವ ಜಲಸಿರಿ ಹಾಗೂ ವಿವಿಧ ಬಣ್ಣದ ಚಿತ್ತಾರದ ನಡುವೆ ಹಮ್ಮಿಕೊಳ್ಳಲಾಗಿದ್ದ ಲೇಸರ್ ಶೋ ಪ್ರವಾಸಿಗರ ಮನಸೂರೆಗೊಂಡಿತು. ಭಾನುವಾರ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ ಗಂಟೆವರೆಗೆ ಜಿಲ್ಲೆಯ ವಿವಿಧ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು. ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ಗಾಯನ ಜನರ ಮನ ಸೆಳೆಯಿತು.

ನಂತರ ಜಾನಪದ ಕಲಾವಿದರಾದ ಸವಿತಕ್ಕ, ಹರ್ಷ, ಕಂಬದ ರಂಗಯ್ಯ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ಕಾರ್ಯಕ್ರಮ ನಡೆಸಿದರು. ತಾಲ್ಲೂಕಿನ ಹಲಗೂರು, ಕಿರುಗಾವಲು, ಬಿ.ಜಿ.ಪುರ, ಮಳವಳ್ಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ನೂರಾರು ಬಸ್‌ಗಳ ಮೂಲಕ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಡಿವೈಎಸ್‌ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ನೂರಾರು ಪೊಲೀಸರು ಭದ್ರತೆ ಕಲ್ಪಿಸಿದ್ದರು.

Tags:
error: Content is protected !!