ಮಂಡ್ಯ: ವೇಗವಾಗಿ ಬಂದ ಬೈಕ್ ಸ್ಕೈವಾಕ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯದ ಮಹಿಳಾ ಕಾಲೇಜು ಬಳಿ ನಡೆದಿದೆ.
ಕಾಲೇಜು ಬಳಿ ಹೊಸದಾಗಿ ಸ್ಕೈವಾಕರ್ ನಿರ್ಮಾಣ ಮಾಡಲಾಗಿತ್ತು. ವೇಗವಾಗಿ ಬಂದ ಬೈಕ್ ಸ್ಕೈವಾಕ್ ಕಂಬಕ್ಕೆ ಅಪ್ಪಳಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಯುವಕರ ದೇಹ ಛಿದ್ರ ಛಿದ್ರವಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡ್ಯಾನಿಶ್ ಹಾಗೂ ಜೋಶ್ ಎಂಬುವವರೇ ಮೃತ ಯುವಕರಾಗಿದ್ದಾರೆ.
ಇಬ್ಬರೂ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಈ ಸಂಬಂಧ ಮಂಡ್ಯ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





