ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಪ್ರಸಿದ್ಧ ದೇವತೆ ಆರತಿ ಉಕ್ಕಡಕ್ಕೆ ಭೇಟಿ ನೀಡಿ ಶಕ್ತಿ ದೇವತೆಯಾಗಿರುವ ಅಹಲ್ಯಾದೇವಿಯ ದರ್ಶನ ಪಡೆದು ಕುಟುಂಬ ಸಮೇತ ನಟ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆರತಿ ಉಕ್ಕಡ ಕ್ಷೇತ್ರಕ್ಕೆ ಇಂದು(ಜನವರಿ.15) ಭೇಟಿ ನೀಡಿದ ನಟ ದರ್ಶನ್, ಸಂಕಷ್ಟ ನಿವಾರಣೆಗಾಗಿ ಶಕ್ತಿ ದೇವತೆ ಅಹಲ್ಯಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ದೃಷ್ಟಿ ದೋಷ ಹಾಗೂ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಇನ್ನೂ ನಟ ದರ್ಶನ್ ಅವರಿಗೆ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ಅಳಿಯ ಚಂದನ್, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ನಟ ಧನ್ವೀರ್ ಸಾಥ್ ನೀಡಿದ್ದಾರೆ.
ನಟ ದರ್ಶನ್ ನಿನ್ನೆ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಂಕ್ರಾತಿ ಹಬ್ಬ ಆಚರಿಸಿದರು. ಇದರ ಬೆನ್ನಲ್ಲೇ ಇಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಬೆನ್ನು ನೋವಿನ ಬಗ್ಗೆ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಮಂಡ್ಯದ ಆರತಿ ಉಕ್ಕಡ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.





