Mysore
28
broken clouds

Social Media

ಬುಧವಾರ, 28 ಜನವರಿ 2026
Light
Dark

ಶಿಂಷಾ ನದಿಗೆ ಈಚಲು ಹೋದ ಇಬ್ಬರು ನೀರುಪಾಲು

ಭಾರತೀನಗರ: ಇಲ್ಲಿಗೆ ಸಮೀಪದ ಕ್ಯಾತಘಟ್ಟ ಹೆಬ್ಬಾಳದಲ್ಲಿ ಶಿಂಷಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಆಲಭುಜನಹಳ್ಳಿ ಗ್ರಾಮದ ಸಿದ್ದರಾಜು ಅವರ ಪುತ್ರ ಎ.ಎಸ್.ಚೇತನ್(16) ಹಾಗೂ ಸ್ವಾಮಿ ಅವರ ಪುತ್ರ ದರ್ಶನ್(19) ಎಂಬವರು ಈಜಲು ಹೋಗಿ ಮೃತಪಟ್ಟವರು.

ಈ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಕ್ಯಾತಘಟ್ಟ ಗ್ರಾಮದ ಬಳಿ ಇರುವ ಶಿಂಷ ನದಿಯಲ್ಲಿ ಈಜಲು ಹೋಗಿದ್ದಾಗ ಸುಳಿಗೆ ಸಿಲುಕಿ ಸಾವನಪ್ಪಿದ್ದಾರೆಂದು ತಿಳಿದು ಬಂದಿದೆ.

ಚೇತನ್ ಎಂಬಾತ ಭಾರತೀ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾಗಿದ್ದ, ದರ್ಶನ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎನ್ನಲಾಗಿದೆ.

ಯುವಕರು ಮೃತಪಟ್ಟ ಸುದ್ದಿ ತಿಳಿದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಆಲಭುಜನಹಳ್ಳಿ ಗ್ರಾಮಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮವಾದ ಆಲಭುಜನಹಳ್ಳಿಯಲ್ಲಿ ನೆರವೇರಿತು.

Tags:
error: Content is protected !!