ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ 17,79,243 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಳವಳ್ಳಿಯಲ್ಲಿ ಗಂಡು-126118 ಹೆಣ್ಣು-127487, ತೃತೀಯ ಲಿಂಗಿಗಳು-23, ಒಟ್ಟು 253628 ಮತದಾರರು, ಮದ್ದೂರಿನಲ್ಲಿ ಗಂಡು-104280, ಹೆಣ್ಣು-111443, ತೃತೀಯ ಲಿಂಗಿಗಳು-22, ಒಟ್ಟು 215745 ಮತದಾರರು, ಮೇಲುಕೋಟೆಯಲ್ಲಿ ಗಂಡು-100379, ಹೆಣ್ಣು-103010, ತೃತೀಯ ಲಿಂಗಿಗಳು-9, ಒಟ್ಟು 203398 ಮತದಾರರು, ಮಂಡ್ಯದಲ್ಲಿ ಗಂಡು-111868, ಹೆಣ್ಣು-117759, ತೃತೀಯ ಲಿಂಗಿಗಳು- 36, ಒಟ್ಟು 229663 ಮತದಾರರು, ಶ್ರೀರಂಗಪಟ್ಟಣ ಗಂಡು-106157, ಹೆಣ್ಣು-111431, ತೃತೀಯ ಲಿಂಗಿಗಳು- 44, ಒಟ್ಟು 217632 ಮತದಾರರು, ನಾಗಮಂಗಲದಲ್ಲಿ ಗಂಡು-107760, ಹೆಣ್ಣು-108783, ತೃತೀಯ ಲಿಂಗಿಗಳು- 11, ಒಟ್ಟು 216554 ಮತದಾರರು, ಕೃಷ್ಣರಾಜಪೇಟೆಯಲ್ಲಿ ಗಂಡು-111542 ಹೆಣ್ಣು-112284 ತೃತೀಯ ಲಿಂಗಿಗಳು- 11, ಒಟ್ಟು 223837 ಮತದಾರರು, ಕೆ. ಆರ್ ನಗರದಲ್ಲಿ ಗಂಡು-108008, ಹೆಣ್ಣು-110766, ತೃತೀಯ ಲಿಂಗಿಗಳು- 12, ಒಟ್ಟು 218786 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಏ.26 ರಂದು ನಡೆಯುವ ಮತದಾನಕ್ಕಾಗಿ 2076 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-264, ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಒಟ್ಟು 2076 ಮತಗಟ್ಟೆಗಳಿವೆ ಎಂದರು.
ಮಳವಳ್ಳಿ – 137, ಮದ್ದೂರು – 127, ಮೇಲುಕೋಟೆ – 192, ಮಂಡ್ಯ – 131, ಶ್ರೀರಂಗಪಟ್ಟಣ – 125, ನಾಗಮಂಗಲ – 150, ಕೃಷ್ಣರಾಜಪೇಟೆ – 132, ಕೆ. ಆರ್. ನಗರ – 126, ಒಟ್ಟು – 1120 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅನ್ನು ಅಳವಡಿಸಲಾಗುವುದು.
ಮತಗಟ್ಟೆಯ 100 ಮೀಟರ್ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ ಹಾಗೂ ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್ ಗಳನ್ನು ತೆರೆಯುವಂತಿಲ್ಲ ಹಾಗೂ ಮತಗಟ್ಟೆಯ 200 ಮೀ. ನಿಂದ ಹೊರಗೆ ತಾತ್ಕಾಲಿಕ ಬೂತ್ ತೆರೆಯಲು ಬಯಸಿದ್ದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಹಾಗೂ ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಈ ಟೆಂಟ್ ನಲ್ಲಿ ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಟಾರ್ಪಲಿನ್ ಅಥವಾ ಛತ್ರಿ ಮೇಲ್ಚಾವಣಿ ಹೊಂದಬಹುದಾಗಿದ್ದು, 2 ಕುರ್ಚಿ ಮತ್ತು ಮೇಜು ಹೊಂದಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ರಾಜಕೀಯ ಅಭ್ಯರ್ಥಿಗಳು ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಧ್ವನಿ ವರ್ಧಕಗಳ ಬಳಕೆ ಮಾಡಲು ಅವಕಾಶವಿಲ್ಲ ಆದರೆ ಮನೆಮನೆ ಭೇಟಿಗೆ ಅವಕಾಶವಿರುತ್ತದೆ.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.