ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ಅವರು ತಮ್ಮ ಅಫಿಡವಿಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ತಮಗಿಂತ ತಮ್ಮ ಪತ್ನಿಯೇ ಶ್ರೀಮಂತೆ ಎಂದು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮತ್ತು ಅವರ ಪತ್ನಿ ಕುಸುಮಾ ಅವರು 622.96 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಗೌಡರ ಪತ್ನಿ ಅವರಿಗಿಂತ ಶ್ರೀಮಂತರಾಗಿದ್ದಾರೆ.
ಸ್ಟಾರ್ ಚಂದ್ರು ಅವರ ವೈಯಕ್ತಿಕ ಆಸ್ತಿ ಮೌಲ್ಯ ರೂ. 267.05 ಕೋಟಿ ಮತ್ತು ಪಿತ್ರಾರ್ಜಿತವಾಗಿ 26.59 ಕೋಟಿ ಸೇರಿದಂತೆ ಒಟ್ಟು 293.64 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಅವರ ಪತ್ನಿ ಕುಸುಮಾ ಅವರ ಆಸ್ತಿ ಮೌಲ್ಯ 329.32 ಕೋಟಿ ಆಗಿದ್ದು, ಅಫಿಡವಿಟ್‌ನಲ್ಲಿ ‘ಸ್ಟಾರ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್’ನಲ್ಲಿ 176.44 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.