Mysore
21
overcast clouds
Light
Dark

ಮಂಡ್ಯ : ಮಳೆ ಹಾನಿ ಪ್ರದೇಶಗಳಿಗೆ 400 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ

ಮಂಡ್ಯ : ಕಳೆದ ಮೂರು ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾನಿ ಗೊಳಗಾದ ಪ್ರದೇಶಗಳಿಗೆ ಅಗತ್ಯ ವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಪ್ರಕೃತಿ ವಿಕೋಪ ನಿಧಿಯಿಂದ .400 ರೂ ಕೋಟಿ ಹಣ ಬಿಡುಗಡೆ ಮಾಡುವಂತೆ  ಶಾಸಕರಾದ ದಿನೇಶ್ ಗೂಳಿಗೌಡ ಮತ್ತು ಶಾಸಕರಾದ ಮಧು ಜಿ . ಮಾದೇಗೌಡ ಅವರು ಜಿಲ್ಲೆಯ ಅಬಕಾರಿ ಮತ್ತು ಉಸ್ತುವಾರಿ ಸಚಿವರಾದ ಹೆಚ್. ಗೋಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಕಳೆದ  ಮೂರು ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿನ ಜನ – ಜಾನುವಾರು , ಕೃಷಿ – ತೋಟಗಾರಿಕೆ ಬೆಳೆಗಳ ಹಾನಿ , ಶಾಲೆಗಳು , ಆಸ್ಪತ್ರೆಗಳು , ಗ್ರಾಮೀಣ ರಸ್ತೆಗಳು / ಲೋಕೋಪಯೋಗಿ ರಸ್ತೆಗಳು , ಪಟ್ಟಣ ಪಂಚಾಯಿತಿ / ನಗರಸಭೆ / ಪುರಸಭೆ , ಸಣ್ಣ ನೀರಾವರಿ , ವಿದ್ಯುತ್ ಕಂಬಗಳ ಲೈನ್‌ಗಳು ಸೇರಿದಂತೆ ಜಿಲ್ಲೆಯ ಮೂಲಭೂತ ಸೌಲಭ್ಯ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು
ಹಾನಿಗೊಳಗಾದ ವಿವರ ಇಂತಿದೆ.
– 264.54 ಹೆಕ್ಟೇರ್ ಕೃಷಿ ಬೆಳೆಹಾನಿ
> 707.81 ಹೆಕ್ಟೇರ್‌ ‘ ತೋಟಗಾರಿಕೆ ಬೆಳೆಗಳ ಹಾನಿ
> 259 ಶಾಲೆಗಳಿಗೆ ಹಾನಿ
> 535 ಶಾಲಾ ಕೊಠಡಿ ಹಾನಿ
> 51 ಸೇತುವೆಗಳು
> 25 ಅಂಗನವಾಡಿ ಕೇಂದ್ರಗಳ ಹಾನಿ
> 245.4 ಕಿ.ಮೀ. – 180 ಹಳ್ಳಿಗಳ ರಸ್ತೆಗಳು ಹಾಳಾಗಿವೆ .
> 1000 ಕ್ಕೂ ಹೆಚ್ಚ ಮನೆಗಳ ಹಾನಿ
ಪ್ರಾಥಮಿಕ ಅಂದಾಜು ಒಟ್ಟಾರೆ 7 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 400 ಕೋಟಿಗೂ ಹೆಚ್ಚು ಅಸ್ತಿ – ಪಾಸ್ತಿ , ಜನ – ಜಾನುವಾರುಗಳ ಮೂಲಭೂತ ಸೌಕರ್ಯಗಳು ಹಾನಿಯಾಗಿರುತ್ತದೆ .
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮದ್ದೂರು. ಮಂಡ್ಯ. ಮಳವಳ್ಳಿ. ನಾಗಮಂಗಲ. ಪಾಂಡವಪುರ. KR ಪೇಟೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಗಳಲ್ಲಿ ತುರ್ತಾಗಿ ಮೂಲಭೂತ ಸೌಕರ್ಯಗಳು ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಪ್ರಕೃತಿ ವಿಕೋಪ ನಿಧಿಯಿಂದ ತುರ್ತಾಗಿ ಹಣ ಬಿಡುಗಡೆಗೊಳಿಸಲು ಸೂಕ್ತ ಆದೇಶ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸಂಕಷ್ಟದಲ್ಲಿರುವ ಮಂಡ್ಯ ಜಿಲ್ಲೆಯ ಜನತೆಗೆ ನೆರವಾಗಬೇಕೆಂದು ವಿನಂತಿಸಿದರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ