Light
Dark

ಮಂಡ್ಯದಲ್ಲಿ ಮತ್ತಷ್ಟು ಹನಿಟ್ರ್ಯಾಪ್‌ ಶಂಕೆ : ಎಸ್ಪಿ

ಮಂಡ್ಯ: ಚಿನ್ನದ ವ್ಯಾಪಾರಿ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತಷ್ಟು ಹನಿಟ್ರ್ಯಾಪ್‌ ನಡೆದಿರುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿನ್ನದ ವ್ಯಾಪಾರಿ ಪ್ರಕರಣದಲ್ಲಿ ಆರೋಪಿ ಸಲ್ಮಾಭಾನು ಮತ್ತು ಗ್ಯಾಂಗ್‌ ನಿಂದ ಮತ್ತಷ್ಟು ಕೃತ್ಯ ನಡೆದಿರುವ ಬಗ್ಗೆ ಶಂಕಿಸಲಾಗಿದ್ದು. ಪೊಲೀಸರು ಮತ್ತಷ್ಟು ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹನಿಟ್ರ್ಯಾಪ್‌ ಕುರಿತು ಸಾಕಷ್ಟು ಕರೆಗಳು ಠಾಣೆಗೆ ಬರುತ್ತಿವೆ ಆದರೆ ಯಾರೂ ಕೂಡ ದೂರು ನೀಡಿಲ್ಲ, ಹೀಗಾಗಿ ಹಲವರ ಕೈವಾಡ ಇರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ತಷ್ಟು ಆರೋಪಿಗಲನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಹೀಗಾಗಿ ಮಂಡ್ಯ ಪಶ್ಚಿಮ ಠಾಣೆಯ ಪೊಲೀಸರು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದಾರೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ