Mysore
29
overcast clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಹುಲಿಮರಿಗಳ ಭೀತಿ; ಅರಣ್ಯದಂಚಿನ ಜನರು ಎಚ್ಚರಿಕೆ ವಹಿಸಲು ಸೂಚನೆ

ಎಚ್.ಡಿ.ಕೋಟೆ: ಒಂದು ವರ್ಷದ ಎರಡು ಹುಲಿಮರಿಗಳು ಕಾಡಿನಿಂದ ಹೊರಕ್ಕೆ ಬಂದಿದ್ದು, ಅರಣ್ಯದಂಚಿನ ಜನರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಿದ್ದರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದಲ್ಲಿ ತಾಯಿ ಮೃತಪಟ್ಟು ಅನಾಥವಾಗಿದ್ದ ಮೂರು ಹುಲಿ ಮರಿಗಳ ಪೈಕಿ ಒಂದು ಗಂಡು ಹುಲಿ ಮರಿ ಮೃತಪಟ್ಟಿದ್ದು ಇನ್ನೆರಡು ಹುಲಿಗಳು ಕಾಡಿನಲ್ಲಿಯೇ ಪತ್ತೆಯಾಗಿದ್ದವು.
ಕಳೆದ ಎರಡು ದಿನಗಳಿಂದ ಹುಲಿಮರಿಗಳು ಕಾಡಿನಿಂದ ಹೊರ ಬಂದಿದ್ದು ಕಾಡಿನಲ್ಲಿ ಕಾಣಿಸಿಲ್ಲ, ಹೀಗಾಗಿ ಸಾರ್ವಜನಿಕರು ಎಚ್ಚರವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲ್ಲೂಕಿನ ತಾರಕ, ಸತ್ತಿಗೆ ಹುಂಡಿ, ಹುಣಸೆಕುಪ್ಪೆ, ಪೆಂಜಹಳ್ಳಿ, ಕೊತ್ತನಹಳ್ಳಿ, ಹಿರೇಹಳ್ಳಿ, ಅಂಕನಾಥಪುರ, ವಾಚನಾಯಕನಹಳ್ಳಿ, ನಾಗನಹಳ್ಳಿ, ಶೀರನಹುಂಡಿ, ಅಂತರಸಂತೆ,ತಾರಕ ನಾಲೆ ಹಾಗೂ ತಾರಕ ನದಿಯ ಅಕ್ಕ-ಪಕ್ಕದ ಜಮೀನುಗಳಲ್ಲಿ, ಮರಿ ಹುಲಿಗಳೆರಡು ಓಡಾಡುತ್ತಿರುವ ಸಂಶಯವಿರುವುದರಿಂದ ಸಾರ್ವಜನಿಕರು ಜಮೀನುಗಳಿಗೆ ನೀರು ಹಾಯಿಸಲು ಮತ್ತು ಇತರೆ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ರಾತ್ರಿ ಸಮಯದಲ್ಲಿ ಹಾಗೂ ಬೆಳಗಿನ ಜಾವದಲ್ಲಿ ಏಕಾಂಗಿಯಾಗಿ ತೆರಳದೇ ಜಾಗರೂಕತೆ ವಹಿಸುವುದು ಹಾಗೂ ದನ ಜಾನುವಾರುಗಳನ್ನು ತಾರಕ ನದಿಯ  ಇಕ್ಕೆಲಗಳಲ್ಲಿ ಕಟ್ಟಿಹಾಕಿ ಮೇಯಿಸದೆ ಮುತುವರ್ಜಿ ವಹಿಸಬೇಕೆಂದು ಮತ್ತು ಮರಿ ಹುಲಿಯ ಚಲನವಲಗಳು ಕಂಡುಬಂದಲ್ಲಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ಒದಗಿಸಬೇಕೆಂದು ಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!