ಮೈಸೂರು : ಜಿಲ್ಲೆಯ ತಿ.ನರಸೀಪುರದ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಹೊತ್ತೊಯ್ದಿದ್ದ 11 ವರ್ಷದ ಬಾಲಕ ಜಯಂತ್ ಮೃತದೇಹ ಪತ್ತೆಯಾಗಿದೆ.
ಗ್ರಾಮದ ದಶಕಂಠ ಎಂಬುವರ ಪುತ್ರ ಜಯಂತ್ ಎಂಬ ಬಾಲಕನೇ ಶವವಾಗಿ ಪತ್ತೆ ಯಾದವ. ಈ ಬಾಲಕ ನೆನ್ನೆ ಸಂಜೆ 3.60ರಲ್ಲಿ ಗ್ರಾಮದಲ್ಲಿರುವ ಅತ್ತೆ ಮನೆಗೆ ಹೋಗಿ ಬಿಸ್ಕೆಟ್ ಪಡೆದುಕೊಂಡು ಬರುತ್ತೇನೆಂದು ಮನೆಯಿಂದ ಹೊರಹೋಗಿದ್ದ ಬಳಿಕ ಮನೆಯವರೆಲ್ಲರೂ ಹುಡುಕಾಡಿದ್ದರೂ ಪತ್ತೆಯಾಗದ ಕಾರಣ ಚಿರತೆ ಎಳೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿತ್ತು.
ಇಂದು ಬೆಳಿಗ್ಗೆ ಅರ್ಧ ತಿಂದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿದ್ದು, ಮೃತ ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಚಿರತೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಚಿರತೆ ಸೆರೆ ಹಿಡಿಯುವ ತನಕ ಗ್ರಾಮಸ್ಥರು ಸಾಕಷ್ಟು ಜಾಗೃತರಾಗಿ ಇರುವಂತೆ ತಿಳಿಸಿದ್ದಾರೆ.