ಕೊಳ್ಳೇಗಾಲ: ಕಳೆದ ಮೂರು ತಿಂಗಳ ಹಿಂದೆ ಚಿರತೆ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹನೂರು ಶಾಸಕ ಆರ್.ನರೇಂದ್ರ ಅವರು ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಹನೂರು ತಾಲ್ಲೂಕಿನ ಕೆ.ವಿ.ಎನ್.ದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಗೋವಿಂದಯ್ಯರವರ ಪತ್ನಿ ಮಹದೇವಮ್ಮ ಎಂಬಾಕೆಗೆ 7.50 ಲಕ್ಷ ರೂ. ಪರಿಹಾರದ ಚೆಕ್ ನ್ನು ವಿತರಿಸಿದರು.
ಬಳಿಕ ಶಾಸಕರು ಮಾತನಾಡಿ, ಗೋವಿಂದಯ್ಯ ಕುಟುಂಬಕ್ಕೆ ಸರ್ಕಾರದ ವತಿಯಿಂದ 7.5ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಪರಿಹಾರ ಹಣವನ್ನು ಸರಿಾಂಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಸಲಹೆ ನೀಡಿದರು.
ಹನೂರು ವನ್ಯಜೀವಿ ವಲಯ ಎಸಿಎಫ್ ಅಂಕರಾಜು, ಮುಖಂಡರುಗಳಾದ ಶ್ರೀನಿವಾಸ್, ಟಿ.ಮಹದೇವ, ಮಾಜಿ ಛೇರ್ಮನ್ ನರಸಿಂಹಯ್ಯ, ನಾಗೇಶ್, ಎನ್.ಮಹದೇವ, ಕೃಷ್ಣಮೂರ್ತಿ, ಕದರಯ್ಯ ಇತರರು ಹಾಜರಿದ್ದರು.