Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕ್ರೈಸ್ತರ ಕಲ್ಯಾಣಕ್ಕೆ 50 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಮನವಿ

ಚಾ.ನಗರ: ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಕೆನಡಿ ಹೇಳಿಕೆ

ಚಾಮರಾಜನಗರ: ರಾಜ್ಯದಲ್ಲಿರುವ ಕ್ರೈಸ್ತರ ಕಲ್ಯಾಣಕ್ಕೆಂದು ಬಿಜೆಪಿ ಸರ್ಕಾರವು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ೫೦ ಕೋಟಿ ರೂ. ನೀಡಿದ್ದು, ಇನ್ನು ೫೦ ಕೋಟಿ ರೂ. ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಜೆ.ಕೆನಡಿ ಶಾಂತಕುವಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾತನಾಡಿದ ಅವರು, ಈಗ ನೀಡಿರುವ ೫೦ ಕೋಟಿ ರೂ. ಅನುದಾನ ಅಭಿವೃದ್ಧಿಕಾರ್ಯಕ್ರಮಗಳಿಗೆ  ಸಾಲುತ್ತಿಲ್ಲ. ಆದ್ದರಿಂದ ಮತ್ತಷ್ಟು ಅನುದಾನ ಕೋರಲಾಗಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ೨೦೧೧ ರಲ್ಲಿ ಸಮಿತಿಯನ್ನು ರಚಿಸಲಾಯಿತು. ನಾನು ಅಧ್ಯಕ್ಷನಾಗಿ ನೇಮಕಗೊಂಡು ೩ ತಿಂಗಳಾಗಿದ್ದು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸಮಿತಿಯು ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸಲು ಮತ್ತು ವಾಹಿತಿ ನೀಡಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಶಿವಮೊಗ್ಗ, ಬಳ್ಳಾರಿ ಸೇರಿದಂತೆ ೧೬ ಜಿಲ್ಲೆಗಳಲ್ಲಿ ಪ್ರವಾಸ ವಾಡಲಾಗಿದೆ. ಈ ಜಿಲ್ಲೆಯು ೧೭ನೇಯದು. ರಾಜ್ಯದ ಸುಮಾರು ೧೯೫ ಚರ್ಚ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಂಗಳವಾರ ಇದೇ ಜಿಲ್ಲೆಯ ೪ ಚರ್ಚ್‌ಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದೇನೆ. ನಗರದ ಸಂತಪೌಲರ ಚರ್ಚ್‌ನಲ್ಲಿ ಸಮಿತಿಯ ಅನುದಾನ ೧ ಕೋಟಿ ರೂ.ಗಳಲ್ಲಿ ಸಮುದಾಯ ಭವನ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಸಮಿತಿಗೆ ಆರಂಭದಲ್ಲಿ ೫೦ ಕೋಟಿ ರೂ. ಅನುದಾನ ನೀಡಲಾಗಿತ್ತು. ಈಗ ೯೦ ಕೋಟಿ ರೂ.ತನಕ ಏರಿಕೆಯಾಗಿದೆ. ಚರ್ಚ್‌ಗಳ ದುರಸ್ತಿ, ಸಮುದಾಯ ಭವನ ನಿರ್ಮಾಣ, ಸ್ಮಶಾನಗಳಿಗೆ ಕಾಂಪೌಂಡ್, ವೃದ್ಧಾಶ್ರಮಗಳಿಗೆ ಅನುದಾನ ವಿತರಿಸಲಾಗಿದೆ ಎಂದು ಹೇಳಿದರು.

ವಿದೇಶಕ್ಕೆ ವ್ಯಾಸಂಗ ವಾಡಲು ಹೋಗುವ ಕ್ರೈಸ್ತ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ತನಕ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಜಿಲ್ಲೆಯ ಕ್ರೈಸ್ತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅನುದಾನ ಪಡೆದಿರುವುದು ಗಮನಾರ್ಹ ಎಂದು ಮೆಚ್ಚುಗೆ ಸೂಚಿಸಿದರು.
ಸಮಿತಿಯಿಂದ ಸಾಲ ಸೌಲಭ್ಯ ಯೋಜನೆಗಳು, ಶೈಕ್ಷಣಿಕ ಸಾಲ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಒಟ್ಟಾರೆ ರಾಜ್ಯದ ಕ್ರೈಸ್ತರ ಅಭಿವೃದ್ಧಿಗೆ ಸಮಿತಿಯು ಬದ್ಧವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಮಧುಕುವಾರ್, ಕ್ರಿಶ್ಚಿಯನ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಕಾರ್ಯದರ್ಶಿ ವಾರ್ಟಿನ್ ಹಾಜರಿದ್ದರು.


ಬಿಜೆಪಿ ತಾರತಮ್ಯ ಮಾಡುತ್ತಿಲ್ಲ

ಬಿಜೆಪಿ ಸರ್ಕಾರ ಯಾವುದೇ ಸಮುದಾಯದ ನಡುವೆ ತಾರತಮ್ಯ ಮಾಡುತ್ತಿಲ್ಲ. ಕ್ರೈಸ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಜೆ.ಕೆನಡಿ ಶಾಂತಕುಮಾರ್ ತಿಳಿಸಿದರು. ಕ್ರೈಸ್ತರ ಕಲ್ಯಾಣಕ್ಕೆ ಸಮಿತಿ ರಚಿಸಿ ಅನುದಾನ ನೀಡಿದ್ದ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಕ್ರೈಸ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸರ್ಕಾರದಿಂದ ಹಲವು ಹಳೇ ಕಾಲದ ಚರ್ಚ್‌ಗಳು ದುರಸ್ತಿಗೊಂಡಿವೆ. ಸಮುದಾಯ ಭವನಗಳು ನಿರ್ವಾಣವಾಗಿವೆ. ಬಿಜೆಪಿಯ ಸಮುದಾಯದ ಬಗ್ಗೆ ಕಾಳಜಿ ಹೊಂದಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ