Mysore
31
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಮಗು, ಪತಿ ತ್ಯಜಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಮಡಿಕೇರಿ: ಮಗು, ಪತಿಯನ್ನು ತ್ಯಜಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ನಿವಾಸಿ ದಿವಂಗತ ಕಟ್ಟಿ ಬಿದ್ದಪ್ಪ-ಶಶೀಲಾ ದಂಪತಿ ಪುತ್ರಿ ಕಾವೇರಮ್ಮ (24) ನೇಣಿಗೆ ಶರಣಾಗಿರುವ ಮಹಿಳೆ. ಕುಟ್ಟೋಳಿ ನಿವಾಸಿ ದಿನೇಶ್‌ ಅವರ ಜೊತೆ 4 ವರ್ಷದ ಹಿಂದೆ ಹಸೆಮಣೆ ಏರಿದ್ದರು. ದಂಪತಿಗೆ 14 ದಿನದ ಮಗು ಇತ್ತು.

ನಿನ್ನೆ ದಿನೇಶ್‌ ತಮ್ಮ ಮನೆಯ ಸಮೀಪದ ಕಾಫಿ ತೋಟಕ್ಕೆ ಕೆಲಸಕ್ಕೆಂದು ಹೋದ ವೇಳೆ, ಕಾವೇರಮ್ಮ ಸ್ನಾನದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗುವಿನ ಕೂಗಾಟ ಕೇಳಿದ ತಕ್ಷಣ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಳ ಅಣ್ಣ ಎಂ.ಎ. ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ವಿರಾಜಪೇಟೆಯ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Tags:
error: Content is protected !!