ಸಿದ್ದಾಪುರ: ಸಮೀಪದ ಅಮ್ಮತ್ತಿ ಹೊಸೂರು ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ಕಾಡಾನೆ ದಾಂಧಲೆ ನಡೆಸಿದೆ.
ಗ್ರಾಮದ ಕತ್ರಿಕೊಲ್ಲಿ ದೇವಿ ಮತ್ತು ಕೊಲ್ಲಿರ ದಿನು ಅವರಿಗೆ ಸೇರಿದ ಬಿತ್ತನೆ ಮಾಡಿದ್ದ ಭತ್ತದ ಸಸಿಮಡಿ ತುಳಿದು ನಾಶ ಮಾಡಿದೆ.
ಗುರುವಾರ ಬೆಳಿಗ್ಗೆ ಗದ್ದೆಗೆ ನುಗ್ಗಿರುವ ಕಾಡಾನೆಗಳು ದಾಳಿ ನಡೆಸಿ ಕೃಷಿ ಫಸಲು ಹಾನಿ ಮಾಡಿವೆ.ಕಾಡಾನೆ ದಾಳಿ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಕೂಡಲೇ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.





