Mysore
28
broken clouds

Social Media

ಬುಧವಾರ, 28 ಜನವರಿ 2026
Light
Dark

ಶೌಚಾಲಯದ ಸೆಫ್ಟಿಕ್‌ ಟ್ಯಾಂಕಿಗೆ ಬಿದ್ದ ಕಾಡಾನೆ ರಕ್ಷಣೆ

Wild elephant rescued after falling into a toilet’s septic tank

ನಾಪೋಕ್ಲು : ರೆಸಾರ್ಟ್ ಒಂದರ ಪಕ್ಕದಲ್ಲಿದ್ದ ಶೌಚಾಲಯದ ಸೆಫ್ಟಿಕ್ ಟ್ಯಾಂಕಿಗೆ ಕಾಡಾನೆಯೊಂದು ಬಿದ್ದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದಲ್ಲಿ ನಡೆದಿದೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಕೀಮಲೆಕಾಡು ಎಂಬಲ್ಲಿ ಬುಧವಾರ ಮುಂಜಾನೆ ಘಟನೆ ನಡೆದಿದೆ. ಗ್ರಾಮದ ನಿವಾಸಿ ಪಟ್ರಪಂಡ ಜಗದೀಶ್ ಅಪ್ಪಯ್ಯ ಮಾಲೀಕತ್ವದ ಕೂರ್ಗ್ ಹೆರಿಟೇಜ್ ರೆಸಾರ್ಟ್ ಸಮೀಪದಲ್ಲಿ ಕಾಡಾನೆಗಳ ಗುಂಪು ಸಂಚರಿಸುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ರೆಸಾರ್ಟ್‌ನ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಒಳಗಡೆ ಬಿದ್ದಿದೆ. ಟ್ಯಾಂಕಿನ ಒಳಗಡೆ ಬಿದ್ದ ಕಾಡಾನೆ ಮೇಲೇಳಲಾಗದೆ ನರಲಾಡುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು. ಇದರ ಜೊತೆಗಿದ್ದ ಮತ್ತೊಂದು ಆನೆ ಸೆಪ್ಟಿಕ್ ಟ್ಯಾಂಕಿನ ಒಳಗಡೆ ಬಿದ್ದ ಆನೆಯನ್ನು ಮೇಲೇತ್ತಲು ಪ್ರಯತ್ನಪಡುವ ದೃಶ್ಯ ಕಂಡು ಬಂದಿದೆ. ಆದರೆ, ಪ್ರಯತ್ನ ಸಫಲತೆ ಕಾಣದೆ ಟ್ಯಾಂಕ್ ಒಳಗಡೆಯಿಂದ ನರಳಾಡಿದ ಕಾಡಾನೆ ಹರಸಾಹಸಪಟ್ಟು ಮೇಲೆದ್ದು ಕೊನೆಗೂ ತೋಟದೊಳಗೆ ಸಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಷ್ಟರಲ್ಲಿ ಕಾಡಾನೆ ಸೆಫ್ಟಿಕ್‌ಟ್ಯಾಂಕ್ ಒಳಗಡೆಯಿಂದ ಮೇಲೆದ್ದು ತೋಟಕ್ಕೆ ತೆರಳಿದೆ. ಬಳಿಕ ಗುಂಪಿನಿಂದ ಬೆರ್ಪಟ್ಟಿದ್ದ ಆನೆಗಳನ್ನು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೇರ್ಪಟ್ಟಿದ್ದ ಆನೆಯನ್ನು ಗುಂಪಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಗ್ರಾಮಸ್ತರು ಭಯ ಭೀತರಾಗಿದ್ದಾರೆ. ಕಳೆದ ವರ್ಷ ಕಾಡಾನೆಯೊಂದು ಮರಿಗೆ ಈ ಗ್ರಾಮದಲ್ಲೇ ಜನ್ಮ ನೀಡಿತ್ತು. ಗ್ರಾಮದ ಪಾಲಂಗಾಲದಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದು ಮೃತಪಟ್ಟಿತ್ತು. ಆದರೂ ಕೂಡ ಅರಣ್ಯ ಇಲಾಖೆ ಹೆಚ್ಚೆತ್ತುಕೊಳ್ಳುತ್ತಿಲ್ಲ ಇಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆಯವರು ಕೂಡಲೇ ಕಾಡಾನೆಯನ್ನು ಗ್ರಾಮಕ್ಕೆ ನುಸಳದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅರಣ್ಯಧಿಕಾರಿಗಳಾದ ಆರ್‌ಎಫ್‌ಒ ಶಿವರಾಂ, ಡಿಆರ್‌ಎಫ್‌ಒ ಶ್ರೀನಿವಾಸ್, ಇಟಿಎಫ್ ಫಾರೆಸ್ಟರ್ ದೇವರಾಜ್ ಹಾಗೂ ಆರ್‌ಆರ್‌ಟಿ, ಕ್ಯಾಂಪ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:
error: Content is protected !!