Ashburn
79
clear sky
Light
Dark

ಪೊನ್ನಂಪೇಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ಪ್ರತ್ಯಕ್ಷ

ಮಡಿಕೇರಿ: ಪೊನ್ನಂಪೇಟೆ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೊನ್ನಂಪೇಟೆ ಮುಖ್ಯ ರಸ್ತೆಯ ರಾಮಕೃಷ್ಣ ರೈಸ್ ಮಿಲ್‌ನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ನಂತರ ಆನೆ ಮುಖ್ಯ ರಸ್ತೆ ಮಾರ್ಗವಾಗಿ ಮುತ್ತಪ್ಪ ದೇವಸ್ಥಾನದ ಹಿಂಬದಿಯ ತೋಟಕ್ಕಾಗಿ ಅರಣ್ಯ ಮಹಾವಿದ್ಯಾಲಯದ ಸಮೀಪದ ಗದ್ದೆಯಲ್ಲಿ ಹಾದುಹೋಗಿದೆ.

ಇದೀಗ ಪೊನ್ನಂಪೇಟೆಯ ಪಟ್ಟಣದ ಸಮೀಪ ಈ ಆನೆ ಸುತ್ತಾಡುತ್ತಿದ್ದು ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಕೋರಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಆನೆ ಮುಖ್ಯರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳನ್ನು ಸ್ಥಳೀಯರು ಚಿತ್ರೀಕರಿಸಿದ್ದು, ಅವುಗಳ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ