ವಿರಾಜಪೇಟೆ: ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲ್ದಾರೆ ಹಾಗೂ ಮಠ ಗ್ರಾಮದಲ್ಲಿ ಕಾರು ಹಾಗೂ ಬೈಕ್ ಮೇಲೆ ಕಾಡಾನೆ ದಾಳಿ ಮಾಡಿ ಸಂಪೂರ್ಣ ಜಖಂಗೊಳಿಸಿದೆ.
ಮಠ ಗ್ರಾಮದ ಹೇಮಂತ್ ಮನೆಯ ಸಮೀಪ ನಿಲ್ಲಿಸಿದ ಕಾರಿನ ಮೇಲೆ ಪಕ್ಕದಲ್ಲಿಯೇ ಇದ್ದ ತೆಂಗಿನ ಮರ ತಳ್ಳಿ ಹಾಕಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಹಿಂದೆ ಕೊಡ ಇವರ ಬೈಕನ್ನು ಆನೆ ಸಂಪೂರ್ಣ ಜಖಂಗೊಳಿಸಿತ್ತು. ಸ್ಥಳಕ್ಕೆ ತಿತುಮತಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಆರ್.ಆರ್.ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.