Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಬೇಸಿಗೆಗೂ ಮುನ್ನವೇ ಹಾರಂಗಿ ಡ್ಯಾಮ್‌ನಲ್ಲಿ ನೀರಿನ ಮಟ್ಟ ಇಳಿಕೆ

ಕೊಡಗು: ಜಿಲ್ಲೆಯಲ್ಲಿರುವ ಏಕೈಕ ಹಾರಂಗಿ ಜಲಾಶಯ ಮಳೆಗಾಲದಲ್ಲಿ ತುಂಬಿ ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಹಾಗೆ ಅಬ್ಬರಿಸಿದ ಹಾರಂಗಿ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾದರೆ ಸಾಕು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಸಂಪೂರ್ಣ ಭರ್ತಿಯಾಗಿ ಕೆಆರ್‌ಎಸ್‌ಗೆ ಕಾವೇರಿ ನದಿಯ ಮೂಲಕ 30-40 ಟಿಎಂಸಿಯಷ್ಟು ನೀರನ್ನು ಹರಿಸಲಾಗುತ್ತದೆ.

ಆದರೆ ಅದೇ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದ್ದರಿಂದ ಹಾರಂಗಿ ಜಲಾಶಯವನ್ನು ಅವಲಂಬಿಸಿರುವ ಜನಸಾಮಾನ್ಯರು ಸೇರಿದಂತೆ ಜಾನುವಾರುಗಳಿಗೂ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ.

ಇನ್ನು ಹಾರಂಗಿ ಜಲಾಶಯವನ್ನೇ ಅವಲಂಬಿಸಿಕೊಂಡಿರುವ ಸೋಮವಾರಪೇಟೆ ತಾಲ್ಲೂಕು, ಮೈಸೂರು, ಹಾಸನ ಭಾಗದ ಗ್ರಾಮೀಣ ಭಾಗದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ.

Tags:
error: Content is protected !!