Mysore
20
few clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಕೊಡಗು: ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದ್ದು, ಮಡಿಕೇರಿ ಕಾಲೇಜುವೊಂದರ ವಿದ್ಯಾರ್ಥಿಗಳಾಗಿರುವ ಚಂಗಪ್ಪ ಹಾಗೂ ತರುಣ್‌ ಎಂಬುವವರೇ ಜಲಸಮಾಧಿ ಆಗಿರುವ ನತದೃಷ್ಟ ವಿದ್ಯಾರ್ಥಿಗಳಾಗಿದ್ದಾರೆ.

ಒಟ್ಟು ಮೂವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ನಂತರ ಮೇಲಕ್ಕೆ ಬರಲಾಗದೇ ಇವರ ಪೈಕಿ ಚಂಗಪ್ಪ ಹಾಗೂ ತರುಣ್‌ ತಿಮ್ಮಯ್ಯ ಮುಳುಗಿ ಅಸು ನೀಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿಯ ಜೀವ ಉಳಿದಿದೆ.

Tags:
error: Content is protected !!