Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಏಡಿ ಹಿಡಿಯಲು ಹೋದ ಬಾಲಕ ಕಣ್ಮರೆ

ಕುಶಾಲನಗರ : ಹಾರಂಗಿ ನಾಲೆಯ ಬಳಿ ಏಡಿ ಹಿಡಿಯಲು ಹೋದ ಶಾಲಾ ಬಾಲಕ ನಾಲೆಗೆ ಬಿದ್ದು ಕಣ್ಮರೆಯಾದ ಘಟನೆ ನಡೆದಿದೆ. ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಶಿಬಿರದ ಬಳಿ ಘಟನೆ‌ ನಡೆದಿದ್ದು, ಶಿಬಿರದ ಸಮೀಪ ಹಾದುಹೋಗಿರುವ ಹಾರಂಗಿ ನಾಲೆಗೆ ಬಿದ್ದು ಸದ್ಗುರು ಅಪ್ಪಯ್ಯಸ್ವಾಮಿ ಶಾಲಾ ಬಾಲಕ ಅನಿತ್ ನೀರು ಪಾಲಾಗಿದ್ದಾನೆ. ನಾಲೆಯಲ್ಲಿ ನೀರು ಸ್ಥಗಿತಗೊಳಿಸಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಬೆಳಗ್ಗೆ 8.30 ಕ್ಕೆ ಘಟನೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ