Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ತಲಕಾವೇರಿ: ಕಾಡಾನೆ ದಾಳಿಗೆ ಯುವಕ ಬಲಿ

ಮಡಿಕೇರಿ: ಇಲ್ಲಿನ ತಲಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಮಂಗಳವಾರ ಕಾಡಾನೆ ದಾಳಿಯಲ್ಲಿ ಭಾಗಮಂಡಲ ವ್ಯಾಪ್ತಿಯ ಚೇರಂಗಾಲ ನಿವಾಸಿ ಮತ್ತಾರಿ ಕರುಣಾಕರ ಮೃತಪಟ್ಟಿದ್ದಾರೆ.

ತಲಕಾವೇರಿ ವನ್ಯಧಾಮ ವ್ಯಾಪ್ತಿಗೆ ಮೃತ ಮತ್ತಾರಿ ಕರುಣಾಕರ ಇನ್ನಿತರ 2 ಮಂದಿಯ ಜೊತೆ ತೆರಳಿದ್ದ. ಈ ವೇಳೆ ಕಾಡಾನೆ ಏಕಏಕಿ ದಾಳಿ ನಡೆಸಿದೆ. ಇಬ್ಬರು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು, ಕರುಣಾಕರ ಕಾಡಾನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದಾನೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಭಾಗಮಂಡಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Tags: