ಮಡಿಕೇರಿ: ಚಲಿಸುತ್ತಿದ್ದ ಕಾರಿನ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಬದಿಯ ಬೇಲಿಗೆ ಅಪ್ಪಳಿಸಿ ಪಲ್ಟಿ ಆಗಿರುವ ಘಟನೆ ಸೋಮವಾರಪೇಟೆ –
ಕುಶಾಲನಗರ ಮಾರ್ಗಮಧ್ಯದ ಬೇಳೂರು ಬಾಣೆಯಲ್ಲಿ ಸಂಭವಿಸಿದೆ.
ಸೋಮವಾರಪೇಟೆಯಿಂದ ಕೂಡಿಗೆಯತ್ತ ತೆರಳುತ್ತಿದ್ದ ಇದ್ದಕ್ಕಿದ್ದಾಗೆ ಕಾರಿನ ಸ್ಟೇರಿಂಗ್ ಬೇಳೂರು ಬಾಣೆ ರಸ್ತೆಯಲ್ಲಿ ಲಾಕ್ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಬೇಲಿಗೆ ಡಿಕ್ಕಿಯಾಗಿ ಮೂರು ಬಾರಿ ಪಲ್ಟಿ ಆಗಿದೆ.
ಕೂಡಿಗೆಗೆ ಸೇರಿರುವ ಕಾರಿನಲ್ಲಿದ್ದವರ ಪೈಕಿ ಒಬ್ಬರ ತಲೆಗೆ ಪೆಟ್ಟಾಗಿದ್ದು, ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕಾರು ನಜ್ಜುಗುಜ್ಜಾಗಿದೆ