ಗೋಣಿಕೊಪ್ಪ : ಯೋಧನೊಬ್ಬ ತನ್ನ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದ ಯೋಧ ವಿನು ಕಾರ್ಯಪ್ಪ ಪತ್ನಿ ದೀಪಿಕಾ ದೇಚಮ್ಮಗೆ (೩೨) ತೀವ್ರವಾಗಿ ಗಾಯಗೊಂಡವರು. ಕೌಟುಂಬಿಕ ಕಲಹ ಹಿನ್ನೆಲೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಯೋಧ ವಿನು ಕಾರ್ಯಪ್ಪ ಘಟನೆಯ ನಂತರ ತಲೆಮೆರೆಸಿಕೊಂಡಿದ್ದಾರೆ. ಗಾಯಾಳು ದೀಪಿಕಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





