ಸಿದ್ದಾಪುರ : ಹುಲಿಯು ದಾಳಿ ನಡೆಸಿ ಬೆಲೆಬಾಳುವ ಹಸುವನ್ನು ಕೊಂದು ಹಾಕಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಳ್ಳ ಗ್ರಾಮದ ದೊಡ್ಡಹಡ್ಲು ಹಾಡಿಯಲ್ಲಿ ನಡೆದಿದೆ.
ದೊಡ್ಡಹಡ್ಲು ಗ್ರಾಮದ ಕೃಷ್ಣ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ಮನೆ ಸಮೀಪದಲ್ಲಿ ಮೇಯಲು ಬಿಟ್ಟಿದ್ದರು. ಸಮೀಪದ ಅರಣ್ಯದಿಂದ ಬಂದ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ. ಹಸುವನ್ನು ಸುಮಾರು ೧೦೦ ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿದೆ. ಕುಶಾಲನಗರ ವಲಯ ಅರಣ್ಯ ಅರಣ್ಯಾಕಾರಿಗಳು ಹಾಗೂ ಸಿಬ್ಬಂದಿ, ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





