Mysore
22
clear sky

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ!

ಕೊಡಗು/ಕುಶಾಲನಗರ: ನಗರದ ಪುರಸಭಾ ವ್ಯಾಪ್ತಿಯಲ್ಲಿ ಸೈನಿಕರ ಮನೆಯೊಂದು ಸೇರಿದಂತೆ ಸರಣಿ ಕಳ್ಳತನ ನಡೆದಿರುವ ಪ್ರಕರಣ ದಾಖಲಾಗಿದೆ.

ಇಲ್ಲಿನ ಮೂರು ಬಡಾವಣೆಗಳಲ್ಲಿನ ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಸ್ವಾಮಿ ಬಡಾವಣೆ, ವಿಮಲ ವೀರಪ್ಪ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿದ್ದಾರೆ. ಸ್ವಾಮಿ ಬಡಾವಣೆಯ ದಿ.ಹರಿಣಿ, ವಿಮಲ ವೀರಪ್ಪ ಬಡಾವಣೆಯ ಸೈನಿಕ ಪೂರ್ಣಯ್ಯ ಹಾಗೂ ಚಿಣ್ಣಪ್ಪ ಮನೆ ಸೇರಿದಂತೆ ವಿವಿಧ ಬಡಾವಣೆಗಳು ಒಳಗೊಂಡಂತೆ ಮೂರು ಮನೆಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬೇಟೆಗೆ ಪೊಲೀಸರು ಸಂಚು ರೂಪಿಸಿದ್ದಾರೆ.

Tags:
error: Content is protected !!