ವಿರಾಜಪೇಟೆ: ಮದುವೆ ಸಮಾರಂಭಕ್ಕೆ ತೆರಳಿ ಹಿಂತಿರುಗುತ್ತಿದ್ದ 4 ವಾಹನಗಳು ಅಪಘಾತವಾದ ಘಟನೆ ವಿರಾಜಪೇಟೆಯ ಪೆರುಂಬಾಡಿ ಬಳಿ ನಡೆದಿದೆ.
ಇಲ್ಲಿನ ಕೊರಗಜ್ಜ ದೇವಾಲಯದ ಮುಂಭಾಗದಲ್ಲಿ ರಾತ್ರಿ 11 ಗಂಟೆ ವೇಳೆಯಲ್ಲಿ ಘಟನೆ ನಡೆದಿದೆ.
ಮಂಜು ಕವಿದ ವಾತಾವರಣ ಹಾಗೂ ಮುಂಬದಿಯಿಂದ ಬಂದ ವಾಹನದ ಲೈಟ್ ಚಾಲಕನ ಕಣ್ಣಿಗೆ ಬಡಿದ ಪರಿಣಾಮ ಒಂದರ ನಂತರ ಒಂದರಂತೆ 4 ವಾಹನಗಳು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.





