ಮಡಿಕೇರಿ: ಇಲ್ಲಿನ ಪೊನ್ನಂಪೇಟೆ ತಾಲೂಕು ಈಚೂರು ಗ್ರಾಮದಲ್ಲಿ ನಿನ್ನೆ ಸಂಜೆ ಆನೆಗಳು ಕಾಣಿಸಿಕೊಂಡಿದ್ದವು. ಕೂಡಲೇ ಅರಣ್ಯ ಇಲಾಖೆಯವರು ಓಡಿಸಲು ಯತ್ನಿಸಿದರು ಕೂಡ ಆನೆಗಳ ಹಿಂಡು ಮತ್ತೆ ಈಚೂರು ಗ್ರಾಮದಲ್ಲಿಯೇ ಬೀಡು ಬಿಟ್ಟಿವೆ. ಇದರಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ಕಂಡಿಪಾಡಿ ಪವನ್ ಎಂಬುವರ ಬಾಳೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ ತೋಟವನ್ನು ನಾಶಪಡಿಸಿವೆ ಹಾಗೆ ಭತ್ತದ ಗದ್ದೆಗೂ ಕೂಡ ದಾಳಿ ನಡೆಸಿ ಅಪಾರ ನಷ್ಟವನ್ನು ಉಂಟು ಮಾಡಿದೆ.
ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಈ ಭಾಗದ ಸಾರ್ವಜನಿಕರು ಕೋರಿಕೊಂಡಿದ್ದಾರೆ.