ಕೊಡಗು: ಜಿಲ್ಲೆಯಲ್ಲಿ ಕೇರಳದ ನಾಲ್ಕು ಪ್ರವಾಸಿ ಬಸ್‌ಗಳಿಗೆ ಪೊಲೀಸರು ದಂಡ ಹಾಕಿದ್ದಾರೆ.
ಕೇರಳ ರಾಜ್ಯದಿಂದ ಪ್ರವಾಸಿಗರನ್ನು ಹೊತ್ತು ಕೊಡಗು ಜಿಲ್ಲೆಯ ಅನೇಕ ಸ್ಥಳಗಳಿಗೆ ಪ್ರತಿದಿನ 30ಕ್ಕೂ ಹೆಚ್ಚು ಪ್ರವಾಸಿ ಬಸ್ಸುಗಳು ಬರುತ್ತಿವೆ. ಕುಟ್ಟ ಗೇಟ್ ಮೂಲಕ ಪೊನ್ನಂಪೇಟೆ ಗೋಣಿಕೊಪ್ಪ ತಿತಿಮತಿ ಪಟ್ಟಣಕ್ಕಾಗಿ ಕುಶಾಲನಗರ, ಮೈಸೂರು ಜಿಲ್ಲೆಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ಈ ಬಸ್‌ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿದ್ದು, ಹೆಚ್ಚಿನ ಶಬ್ದ ಹಾಗೂ ಕರ್ಕಶ ಸಂಗೀತದೊಂದಿಗೆ ಶಬ್ದ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ವಿರಾಜಪೇಟೆ ಡಿವೈಎಸ್‌ಪಿ ಅವರ ಗಮನಕ್ಕೆ ತಂದಿದ್ದರು.
ಇದನ್ನು ಓದಿ: ಕರ್ನೂಲ್ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ: ಬಸ್‌ಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಈ ಪ್ರವಾಸಿ ಬಸ್ಸುಗಳಿಗೆ ದಂಡ ವಿಧಿಸಿ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೇರಳ ರಾಜ್ಯದಲ್ಲಿ ಧ್ವನಿವರ್ಧಕ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಬಸ್‌ಗಳಲ್ಲಿ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಆದರೆ ಕೇರಳದ ಗಡಿ ದಾಟಿದ ತಕ್ಷಣ ಈ ಪ್ರವಾಸಿ ಬಸ್‌ಗಳಲ್ಲಿ ಧ್ವನಿವರ್ಧಕಗಳು ಮೊಳಗುತ್ತವೆ. ಸಂಜೆಯಾಗುತ್ತಿದ್ದಂತೆ ಬಸ್ಸಿನಲ್ಲಿ ಬಣ್ಣ ಬಣ್ಣದ ದೀಪಗಳನ್ನು ಹಾಕಿಕೊಳ್ಳುವುದರೊಂದಿಗೆ ಹೆಚ್ಚಿನ ಶಬ್ದದ ಸಂಗೀತದೊಂದಿಗೆ ಶಬ್ಧಮಾಲಿನ್ಯ ಉಂಟುಮಾಡುತ್ತಿವೆ.





