ಮಡಿಕೇರಿ: ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರೆದಿದ್ದು, ಗುರುವಾರದ(ಜು.17)ವರೆಗೆ ಹವಮಾನ ಇಲಾಖೆ ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ.
ಬುಧವಾರ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ನಾಪೋಕ್ಲು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ಜಿಲ್ಲೆಯಲ್ಲಿ ಬುಧವಾರ ವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.88 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ 36.03 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 7.15 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ 6.75 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 13.85 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ 3.60 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ 31, ನಾಪೋಕ್ಲು 22.2 ಸಂಪಾಜೆ 47.5, ಭಾಗಮಂಡಲ 43.4, ವಿರಾಜಪೇಟೆ 6.8, ಅಮ್ಮತ್ತಿ 7.50, ಹುದಿಕೇರಿ 16, ಶ್ರೀಮಂಗಲ 6, ಪೊನ್ನಂಪೇಟೆ 3, ಬಾಳೆಲೆ 2, ಸೋಮವಾರಪೇಟೆ 14.4, ಶನಿವಾರಸಂತೆ 18, ಶಾಂತಳ್ಳಿ 28, ಕೊಡ್ಲಿಪೇಟೆ 6, ಕುಶಾಲನಗರ 0.2, ಸುಂಟಿಕೊಪ್ಪ 7 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2.859 ಅಡಿಗಳಿದ್ದು, 2855.73 ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು 5155 ಕ್ಯುಸೆಕ್‌ಇದ್ದು, ನೀರಿನ ಹೊರ ಹರಿವು ನದಿಗೆ 1958 ಕ್ಯುಸೆಕ್ ಇದೆ.





