Mysore
26
broken clouds
Light
Dark

ಕೊಡಗಿನ ಹಲವೆಡೆ ತಂಪೆರೆದ ಮಳೆ

ಕೊಡಗು: ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ( ಏಪ್ರಿಲ್‌ 11 ) ಮಳೆಯಾಗಿರುವ ವರದಿಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ವಿಡಿಯೊಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಿಲ್ಲೆಯ ಕಡರ ಹಾಗೂ ಪಾಲಂಗಾಲದಲ್ಲಿ ಮಳೆಯಾಗಿದ್ದು, ಈ ವಿಡಿಯೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಈ ವಿಡಿಯೊಗಳಲ್ಲಿ ಮಳೆ ಪ್ರಮಾಣ ದೊಡ್ಡ ಮಟ್ಟದಲ್ಲಿಯೇ ಇದ್ದು, ಹಲವು ತಿಂಗಳುಗಳಿಂದ ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.