Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಡಿಕೇರಿ: ಪ್ರತ್ಯೇಕ ಘಟನೆಯಲ್ಲಿ ಕಾಡಾನೆ ದಾಳಿ

ಮಡಿಕೇರಿ: ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಅಂದಗೋವೆ ಪೈಸಾರಿಯಲ್ಲಿ ಕಾಡಾನೆಯೊಂದು ವ್ಯಕ್ತಿಯೊರ್ವ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಬೆನ್ನಲ್ಲೇ ಮತ್ತೊಂದು ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ತೋಟದಲ್ಲಿಯೂ ಮಹಿಳೆ ಮೇಲೆ ಕಾಡನೆ ದಾಳಿ ನಡೆಸಿದೆ.

ತೋಟದಲ್ಲಿ ಎಂದಿನಂತೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಕಾರ್ಮಿಕರ ಮದ್ಯೆ ನುಗ್ಹಿದ ಕಾಡಾನೆ ಮಹಾದೇವಮ್ಮ ಎಂಬುವವರ ಮೇಲೆ ದಾಳಿ ನಡೆಸಿದೆ. ಇದರಿಂದ ಕಾಫಿ ಗಿಡದ ಮೇಲೆ ಬಿದ್ದ ಪರಿಣಾಮ ಆಕೆಯ ತೊಡೆಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಗ್ರಾಮ ಪಂಚಾಯತಿಯ ವಾಟರ್ ಮ್ಯಾನ್ ಮೇಲೆ ದಾಳಿ ಮಾಡಿ ಗಾಯಗೋಳಿಸಿರುವ ಘಟನೆ 7ನೇ ಹೊಸಕೋಟೆ ಅಂದಗೋವೆ ಪೈಸಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾಡಾನೆ ಅವರನ್ನು ಮೋರಿಯೊಳಗೆ ನೂಕಿದ್ದರಿಂದ ಜೀವ ಉಳಿದಿದೆ.

ಕೊಡಗರಹಳ್ಳಿ ಗ್ರಾಮ ಪಂಚಾಯತಿಗೆ ಒಳಪಟ್ಟಿರುವ ಅಂದ ಗೋವೆ ಪೈಸಾರಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಸೇನ್ ಎಂಬುವವರು ಎಂದಿನಂತೆ ಇಂದು ಬೆಳಗ್ಗೆ ನೀರು ಸರಬರಾಜು ಕರ್ತವ್ಯಕ್ಕೆಂದು ತೆರಳುತ್ತಿದ್ದ ಸಂದರ್ಭ ತೋಟದ ಒಳಗಿನಿಂದ ದಿಡೀರ್ ಪ್ರತ್ಯಕ್ಷವಾದ ಕಾಡಾನೆ ವ್ಯಕ್ತಿ ಮೇಲೆ ಎರಗಿದೆ. ಕೂಡಲೇ ಜಾಗೃತರಾದ ಹುಸೇನ್ ಎತ್ತರದ ಜಾಗದಲ್ಲಿ ಒಡಲಾರಂಭಿಸಿದಾಗ ಅವರನ್ನು ಕಾಡಾನೆ ಸೊಂಡಿಲಿನಿಂದ ರಸ್ತೆ ಬದಿಯಲ್ಲಿದ್ದ ಮೋರಿಯೊಳಗೆ ನೂಕಿದೆ. ಅದರ ಒಳಗೆ ಸೇರಿಕೊಂಡ ಹುಸೇನ್ ಅವರು ಜೀವ ಉಳಿಸಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ರೋಷಗೊಂಡ ಕಾಡಾನೆ ಮೋರಿಯ ಮೇಲೆ ಎರಗಿ ಹಾನಿಪಡಿಸಿದೆ. ಆನೆ ಹೊರಟು ಹೋದ ನಂತರ ಸ್ಥಳೀಯರು ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Tags:
error: Content is protected !!