Mysore
23
clear sky

Social Media

ಗುರುವಾರ, 24 ಏಪ್ರಿಲ 2025
Light
Dark

ಮಡಿಕೇರಿ | ಆಕಸ್ಮಿಕ ಬೆಂಕಿ : ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

ಮಡಿಕೇರಿ : ಚಲಿಸುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಮಡಿಕೇರಿ ಹೊರವಲಯದ ಇಬ್ನಿ ರೆಸಾರ್ಟ್‌ ಸಮೀಪ ಹೆದ್ದಾರಿಯಲ್ಲಿ  ಹೊತ್ತಿ ಉರಿದಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳತ್ತಿದ್ದ ಈ ಕಾರಿನಲ್ಲಿ ಸುಟ್ಟ ವಾಸನೆ ಬಂದಿದೆ. ತಕ್ಷಣ ಕಾರು ಚಾಲಕ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿದ್ದಾರೆ. ದಟ್ಟ ಹೊಗೆ ಕಾಣಿಸಿಕೊಂಡು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೆ ಹೊತ್ತಿ ಉರಿಯಿತು.

ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಘನಟೆಯಿಂದ ಕೆಲಕಾಲ ಮಡಿಕೇರಿ- ಕುಶಾಲನಗರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವ್ಯತ್ಯಯವಾಯಿತು.

Tags: