Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಮಡಿಕೇರಿ | ಭತ್ತದ ಲೋಡ್‌ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ

ಮಡಿಕೇರಿ: ಈಚರ್‌ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದಿದೆ.

ಹೆಚ್ ಡಿ ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಏಕಾ ಏಕಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ.

ಈ ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಹಲವು ತಾಸುಗಳ ತನಕ ರಸ್ತೆ ತಡೆ ಉಂಟಾಗಿತ್ತು.

Tags:
error: Content is protected !!