ಮಡಿಕೇರಿ : ರೀಲ್ಸ್ ಹುಚ್ಚಿಗೆ ಬಿದ್ದ ಮೂವರು ಯುವಕರು ಬೈಕ್‌ನಲ್ಲಿ ತೆರಳುವಾಗ ಲಾಂಗ್ ಪ್ರದರ್ಶನ ಮಾಡಿ ಪ್ರಕರಣ ದಾಖಲಿಸಿಕೊಂಡು ಬಂಧನಕೊಳ್ಳಗಾಗಿರುವ ಘಟನೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮೂವರು ಯುವಕರ ಪೈಕಿ ಓರ್ವ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ತೆಗೆದಿದ್ದಾನೆ. ಅಲ್ಲದೆ, ಇದರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾನೆ.
ವಿಡಿಯೋ ಗಮನಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಮರೂರು ಗ್ರಾಮದ ಸೂರ್ಯ, ಚಿಕ್ಕ ಅಳುವಾರದ ಪುನೀತ್, ಹೆಬ್ಬಾಲೆಯ ಶ್ರೀಧರ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೂರ್ಯ ಹಾಗೂ ಪುನೀತ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರೆ, ಶೀಧರ ಎಂಬ ಯುವಕ ತಲೆಮರೆಸಿಕೊಂಡಿದ್ದು ಪರಾರಿಯಾದ ಯುವಕನಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





