ಕುಶಾಲನಗರ: ಕೊಡಗಿನ ಕುಶಾಲನಗರದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ತಾವರೆ ಕೆರೆಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕೆರೆಯಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲಾ ತಾವರೆ ಹೂವುಗಳೇ ಕಾಣಿಸುತ್ತಿವೆ. ಇಡೀ ಕೆರೆಯನ್ನು ತಾವರೆ ಹೂವುಗಳು ಆವರಿಸಿವೆ.
ತಾವರೆಗಳ ಮೇಲೆ ಸೂರ್ಯನ ಕಿರಣ ಬೀಳುತ್ತಿದ್ದಂತೆ ಅವುಗಳ ಹೊಳಪು ಮತ್ತಷ್ಟು ಹೆಚ್ಚುತ್ತಿರುವುದರಿಂದ ಸಂಪೂರ್ಣ ಕೆರೆ ಹೂವುಗಳಿಂದ ಕಂಗೊಳಿಸುತ್ತಿದೆ.
ಸುಂದರವಾದ ಹೂವಿನ ದೃಶ್ಯವನ್ನು ನೋಡಲು ಕೆರೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.





