ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆಯ ಪಕ್ಕಕ್ಕೆ ನುಗ್ಗಿದ ಘಟನೆ ಸೋಮವಾರಪೇಟೆ ಬಳಿ ನಡೆದಿದೆ.
ಸೋಮವಾರಪೇಟೆಯಿಂದ ಸೂರ್ಲಬ್ಬಿ ಮಾರ್ಗವಾಗಿ ತೆರಳುತ್ತಿದ್ದ ಬಸ್ಸೊಂದು ಮಾದಾಪುರ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ಬಳಿ ನಿಯಂತ್ರಣ ಕಳೆದುಕೊಂಡಿದೆ.
ಪರಿಣಾಮ ರಸ್ತೆ ಬದಿಗೆ ಸರಿದು ಅಲ್ಲೇ ಇದ್ದ ಸಣ್ಣ ದಿಬ್ಬಕ್ಕೆ ಡಿಕ್ಕಿಯಾಗಿ ನಿಂತಿದೆ. ಸದ್ಯ ಬಸ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.





