Mysore
20
overcast clouds
Light
Dark

ಕೊಡಗು ಮುಳುಗುತ್ತಿದೆ ನಿಮ್ಮ ರಾಜಕಾರಣ ಬಿಡಿ: ಎ.ಎಸ್.ಪೊನ್ನಣ್ಣ

ಮಡಿಕೇರಿ: ತೀವ್ರ ಮಳೆಯಿಂದ ಕೊಡಗು ಜಿಲ್ಲೆ ಮುಳುಗಿತ್ತಿದೆ. ಈ ಸಂಕಷ್ಟದ ಸಮಯದಲ್ಲಿ ನಿಮ್ಮ ರಾಜಕಾರಣ ಬಿಟ್ಟು ಕೊಡಗಿನ ಜನರ ರಕ್ಷಣೆಗೆ ಪೂರಕವಾದ ಚರ್ಚೆಗೆ ಬನ್ನಿ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ(ಜು.19) ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಾಗ ಪ್ರತಿ ಪಕ್ಷಗಳು ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎ.ಎಸ್.ಪೊನ್ನಣ್ಣ, ಪ್ರಸ್ತುತ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಜನ ಭಯಭೀತರಾಗಿದ್ದಾರೆ. ಊರು,ಕೇರಿ,ರಸ್ತೆ ಎಲ್ಲಾ ನೀರಿನಿಂದ ಮುಳುಗುತ್ತಿದೆ. ಇಂತಹ ಸಂಧರ್ಭದಲ್ಲಿ ಸರ್ಕಾರ ಜನರ ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಕಳೆದ ನಾಲ್ಕು ದಿನದಿಂದ ವಿದ್ಯುತ್ ತಂತಿಗಳು ತುಂಡಾಗಿ ಕೊಡಗು ಕತ್ತಲೆಯ ಕೂಪವಾಗಿದೆ. ಜನರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕಾರಣ ಬೇಡ. ಮೊದಲು ಸಮಸ್ಯೆ ಬಗೆಹರಿಸಲು ಒಂದಾಗಿ ಪ್ರಯತ್ನಿಸುವ ಕೆಲಸ ಆಗಲಿ ಎಂದು ಸರ್ಕಾರ , ಅಡಳಿತ ಹಾಗೂ ವಿಪಕ್ಷಗಳ ಸದಸ್ಯರಿಗೆ ಸದನದಲ್ಲಿ ಒತ್ತಾಯಿಸಿದರು.