Mysore
28
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕೊಡಗು: ಸೈನಿಕ ಶಾಲೆಯಲ್ಲಿ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆ

ಕುಶಾಲನಗರ: ಸೈನಿಕ ಶಾಲೆ ಕೊಡಗಿನಲ್ಲಿ 2024–25ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯು ಏಪ್ರಿಲ್ 9 ಮತ್ತು 10ರಂದು ಎರಡು ದಿನಗಳವರೆಗೆ ನಡೆಸಲಾಯಿತು.

ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಸೃಜನಶೀಲತೆ, ದೇಶಾಭಿಮಾನ , ವಿವಿಧ ಕಲೆ, ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶವನ್ನು ಈ ಸ್ಪರ್ಧೆ ಹೊಂದಿತ್ತು. ಪ್ರಸ್ತುತ ಸ್ಪರ್ಧೆಯಲ್ಲಿ ಶಾಲೆಯ ಮೆನನ್, ಕಾರ್ಯಪ್ಪ, ಕಠಾರಿ ಹಾಗೂ ಸುಬ್ರತೋ ನಿಲಯಗಳು ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಸಮೂಹ ಗೀತೆಗಳು, ಸಮೂಹ ನೃತ್ಯಗಳು, ಸಮೂಹ ಜಾನಪದ ನೃತ್ಯಗಳು ಮತ್ತು ಪರಮವೀರ ಚಕ್ರ ಪುರಸ್ಕೃತರ ಶೌರ್ಯದ ಕಥೆಗಳ ಆಧಾರಿತ ಕಿರು ನಾಟಕಗಳ ಮೂಲಕ ಆಕರ್ಷಕ ಪ್ರದರ್ಶನಗಳನ್ನು ನೀಡಿದರು. ಪ್ರತಿ ನಿಲಯವು ಶಕ್ತಿ, ಭಾವನೆ ಮತ್ತು ದೇಶಪ್ರೇಮ ತುಂಬಿದ ಕಲಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಪ್ರೇಕ್ಷಕರ ಹಾಗೂ ತೀರ್ಪುಗಾರರ ಭಾರೀ ಮೆಚ್ಚುಗೆ ಪಡೆದವು.

ಪ್ರಸ್ತುತ ಸ್ಪರ್ಧೆಯಲ್ಲಿ ಮೆನನ್ ನಿಲಯವು ಎಲ್ಲ ವಿಭಾಗಗಳಲ್ಲಿ ಅಮೋಘವಾದ ಪ್ರದರ್ಶನ ನೀಡಿ ಚಾಂಪಿಯನ್ ನಿಲಯವಾಗಿ ಹೊರಹೊಮ್ಮಿತು. ಇದರೊಂದಿಗೆ ಶಾಲೆಯ ಕೆಡೆಟ್ ಗಿತೇಶ್ ಅತ್ಯುತ್ತಮ ನಟ ಪ್ರಶಸ್ತಿಗೆ, ಕೆಡೆಟ್ ಎನ್‌ಆರ್‌ಇ ಮನು ಅತ್ಯುತ್ತಮ ನಟಿ ಪ್ರಶಸ್ತಿಗೆ ಹಾಗೂ ಕೆಡೆಟ್ ಸಂಪ್ರೀತ್ ಮತ್ತು ಕೆಡೆಟ್ ಸುಹಾನಿ ಅತ್ಯುತ್ತಮ ನಿರೂಪಕ ಪ್ರಶಸ್ತಿಗೆ ಭಾಜನರಾದರೆ, ಮೆನನ್ ನಿಲಯವು ಅತ್ಯತ್ತಮ ಸಂಪನ್ಮೂಲ ಬಳಕೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮುಖ್ಯ ಅತಿಥಿ ಪ್ರಭಾರೆ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಶಾಲೆಯಲ್ಲಿರುವ ಸಂಪತ್ತುಗಳನ್ನು ಸೃಜನಶೀಲವಾಗಿ ಉಪಯೋಗಿಸಿ ಇನ್ನಷ್ಟು ಸಾಧನೆ ಮಾಡುವಂತೆ ಎಲ್ಲಾ ಸ್ಪರ್ಧಿಗಳಿಗೆ ಕರೆ ನೀಡಿದರು.

ಇವರೊಂದಿಗೆ ಶಾಲೆಯ ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಕೀಯ ಅಧಿಕಾರಿ ಡಾ. ಚಿನ್ಮಯಿ, ಹಿರಿಯ ಶಿಕ್ಷಕರಾದ ಶ್ರೀ ವಿಭಿನ್ ಕುಮಾರ್, ಶಾಲೆಯ ಶೈಕ್ಷಣಿಕ ಹಾಗೂ ಆಡಳಿತ ಸಿಬ್ಬಂದಿಯವರು ಹಾಜರಿದ್ದರು.

 

Tags:
error: Content is protected !!