ಸೋಮವಾರಪೇಟೆ : ತಾಲ್ಲೂಕಿನ ಅಡಿಯನಾಡೂರು ಗ್ರಾಮದ ಕೃಷಿಕ ಈರಪ್ಪ(60) ಕಾಡಾನೆ ದಾಳಿಯಿಂದ ಮೈತರಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ತಮ್ಮ ಹಸುವನ್ನು ಹುಡುಕಿಕೊಂಡು ಗೌರಿಗದ್ದೆ ಸಮೀಪದಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂದರ್ಭ ಪಕ್ಕದ ಅರಣ್ಯದಿಂದ ಬಂದ ಕಾಡಾನೆ ಏಕಾಏಕಿ ಈರಪ್ಪ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಈರಪ್ಪ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.