Mysore
20
overcast clouds
Light
Dark

ಎವರೆಸ್ಟ್ ಏರಿದ ಕೊಡಗು ಮೂಲದ ಡಾ. ಲತಾ

ಮಡಿಕೇರಿ : ಕೊಡಗಿನ ಮಹಿಳೆಯೊಬ್ಬರು ಎವರೆಸ್ಟ್ ಶಿಖರ ಏರುವ ಮೂಲಕ ಗಮನ ಸೆಳೆದಿದ್ದಾರೆ. 57 ವರ್ಷದ ಡಾ.ಲತಾ ಎವರೆಸ್ಟ್ ಶಿಖರ ಏರಿ ಸಾಧನೆ ಮಾಡಿದ್ದಾರೆ. ಬೇಸ್ ಕ್ಯಾಂಪ್ ನಲ್ಲಿ ಪಾಲ್ಗೊಂಡು ಮೊದಲ ಹಂತದಲ್ಲಿಯೇ ಗುರಿ ಮುಟ್ಟಿದ್ದು, ಈ ಸಾಧನೆಗೆ ಭಾಜನರಾಗಿದ್ದಾರೆ.

18514 ಅಡಿಯೇರಿ ಗುರಿ ಮುಟ್ಟಿದ್ದು, ಮೂಲತಃ ಕೊಡಗಿನ ಸೋಮವಾರಪೇಟೆ ತಾಲ್ಲೋಕಿನ ಆಲೂರು ಸಿದ್ದಾಪುರ ಸಮೀಪದ ಬಡುಬನ ಹಳ್ಳಿಯ ನಿವಾಸಿ ಇವರು. ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯೆಯಾಗಿ ಸೇವೆಸಲ್ಲಿಸುತ್ತಿದ್ದಾರೆ.