ಮಡಿಕೇರಿ:ಕಟ್ಟೆಮಾಡು ಶ್ರೀ ಮೖತ್ಯಂಜಯ ದೇವಾಲಯದ ಅಚ೯ಕರ ಮೇಲೆ ಹಲ್ಲೆ ಮಾಡಿರುವುದನ್ನು ಕೊಡಗು ಬ್ರಾಹ್ಮಣ ಸಮಾಜ ಖಂಡಿಸಿದೆ. ಈ ಸಂಬಂಧ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ಅಧ್ಯಕ್ಷ ರಾಮಚಂದ್ರ ಮೂಗೂರು ಖಂಡನೆ ವ್ಯಕ್ತ ಪಡಿಸಿದ್ದಾರೆ.
ಬ್ರಾಹ್ಮಣ ಸಮಾಜದ ಪ್ರಮುಖರು ಮಡಿಕೇರಿಯಲ್ಲಿರುವ ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅಚ೯ಕ ವಿಘ್ನೇಶ್ ಭಟ್ ಅವರಿಗೆ ಸಾಂತ್ವಾನ ಹೇಳಿ ಅವರ ಕುಟುಂಬಸ್ಥರಿಗೂ ಧೈಯ೯ ತುಂಬಿದರು.
ಘಟನೆಗೆ ಕಾರಣರಾದವರ ವಿರುದ್ದ ತಡ ಮಾಡದೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಬ್ರಾಹ್ಮಣ ಸಮಾಜದ ಪ್ರಮುಖರು ಒತ್ತಾಯ ಮಾಡಿದ್ದಾರೆ.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾಯ೯ದಶಿ೯ ಜಗದೀಶ್ ಸೋಮಯಾಜಿ, ಪ್ರಮುಖರಾದ ಬಿ.ಜಿ. ಅನಂತಶಯನ, ಜಿ.ಆರ್. ರವಿಶಂಕರ್, ಅರುಣ್ ಸೋಮಯಾಜಿ , ,ವಕೀಲ ಎಂ.ಎನ್ ಶಶಿಕಾಂತ್ ಹಾಜರಿದ್ದರು.
ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಖಂಡನೆ
ಮೂರ್ನಾಡುವಿನಲ್ಲಿ ಇಂದು ನಡೆದ ಅರ್ಚಕರಾದ ವಿಗ್ನೇಶ್ ಭಟ್ ರವರ ಮೇಲಿನ ಹಲ್ಲೆಯನ್ನು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘವು ತೀವ್ರವಾಗಿ ಖಂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ತೇಜೋವಧೆ ಮಾಡಲು ಶ್ರಮಿಸುತ್ತಿದ್ದಾರೆ. ಬ್ರಾಹ್ಮಣರ ಮೇಲಿನ ಈ ರೀತಿಯ ಹಲ್ಲೆ ವಿಷಾದನೀಯ. ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತಾ ತಪ್ಪಿತಸ್ಥರನ್ನು ಹುಡುಕಿ ಅವರಿಗೆ ಸೂಕ್ತವಾದ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಯವರಲ್ಲಿ ಮನವಿ ಮಾಡುತ್ತೇವೆ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಹಲ್ಲೆ ಖಂಡಿಸಿ ಹೇಳಿಕೆ ನೀಡಿದೆ.