Mysore
27
scattered clouds

Social Media

ಬುಧವಾರ, 25 ಮಾರ್ಚ್ 2026
Light
Dark

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ.

ಹುದುಗೂರು ವಲಯ ವ್ಯಾಪ್ತಿಯಲ್ಲಿ ಬಿಲ್ವಾರ ಮರದ ಹತ್ತು ನಾಟಗಳನ್ನು ಟಿಪ್ಪರ್‌ನಲ್ಲಿ ಸಾಗಿಸುತ್ತಿರುವಾಗ ಕಾರ್ಯಾಚರಣೆ ನಡೆದಿದೆ. ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದು, ವಾಹನ ಮತ್ತು ಮರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅರೋಪಿಗಳಾದ ಹೊಸಳ್ಳಿ ಗ್ರಾಮದ ಅನುಜಿತ್, ಅಜಿತ್, ತಣ್ಣೀರುಹಳ್ಳ ಗ್ರಾಮದ ನೂತನ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಽಕಾರಿ ಶೈಲೇಂದ್ರಕುಮಾರ್, ಡಿಆರ್‌ಎಫ್‌ಒ ಬಿ.ಎಸ್.ಚಂದ್ರೇಶ್, ಗಸ್ತುಪಾಲಕ ರವಿಕುಮಾರ್ ಉಪ್ಪಾರ್ ಕಾರ್ಯಾಚರಣೆ ನಡೆಸಿದ್ದಾರೆ.

Tags:
error: Content is protected !!